ಕೋವಿಡ್ ಪರಿಹಾರ: ಅವಧಿ ವಿಸ್ತರಣೆ
Update: 2022-04-07 21:35 IST
ಬೆಂಗಳೂರು, ಎ.7: ಕೋವಿಡ್ ಸೋಂಕಿನಿಂದ ಮೃತರಾದ ಪ್ರಕರಣ ಸಂಬಂಧ ಸಂತ್ರಸ್ತರು ಪರಿಹಾರ ಪಡೆಯುವ ಅವಧಿಯನ್ನು ರಾಜ್ಯ ಸರಕಾರ ಮತ್ತೆ ವಿಸ್ತರಣೆ ಮಾಡಿದೆ.
ಕೋವಿಡ್ ಸೋಂಕಿಗೆ ಗುರಿಯಾಗಿ ನಿಧನರಾದ ವ್ಯಕ್ತಿಯ ಕುಟುಂಬಸ್ಥರು, 90 ದಿನದ ಒಳಗಾಗಿ ಅರ್ಜಿ ಸಲ್ಲಿಸಿ ಪರಿಹಾರ ಧನ ಪಡೆಯಬಹುದಾಗಿದೆ. ಕೇಂದ್ರ ಸರಕಾರದ ಎಸ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ 50 ಸಾವಿರ ರೂ. ಪರಿಹಾರ ದೊರೆಯಲಿದೆ.
ಪರಿಹಾರ ಸಂಬಂಧ ಯಾವುದೇ ರೀತಿಯ ಸುಳ್ಳು ಮಾಹಿತಿ ಸಲ್ಲಿಸಿದರೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯ ಉಪ ಕಾರ್ಯದರ್ಶಿ ಕೆ.ಸಿ.ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.