×
Ad

ಅಹಿತಕರ ಘಟನೆ ಹಿನ್ನೆಲೆ: ಮುಳಬಾಗಿಲು ತಾಲೂಕಿನಾದ್ಯಂತ 2 ದಿನ ನಿಷೇಧಾಜ್ಞೆ ಜಾರಿ

Update: 2022-04-09 10:52 IST
ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜ

ಕೋಲಾರ, ಎ.9: ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದಲ್ಲಿ‌ ಶ್ರೀರಾಮ ಶೋಭಾಯಾತ್ರೆ ವೇಳೆ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಮುಳಬಾಗಿಲು ತಾಲೂಕಿನಾದ್ಯಂತ 2 ದಿನಗಳ ಕಾಲ ನಿಷೇಧಾಜ್ಞೆ ವಿಧಿಸಲಾಗಿದೆ.

ಮುಳಬಾಗಿಲು ತಾಲೂಕಿನಾದ್ಯಂತ ಇಂದಿನಿಂದ 48 ಗಂಟೆಗಳ ದಿನಗಳ ಕಾಲ ನಿಷೇಧಾಜ್ಞೆ ವಿಧಿಸಿ ಕೋಲಾರ ಜಿಲ್ಲಾಧಿಕಾರಿ ವೆಂಕಟ್ ರಾಜ ಆದೇಶ ಹೊರಡಿಸಿದ್ದಾರೆ. ರಾಮ ನವಮಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News