ಅಕೈ ಪದ್ಮಶಾಲಿ, ಬೃಜೇಶ್ ಕಾಳಪ್ಪ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ

Update: 2022-04-09 19:10 GMT

ಬೆಂಗಳೂರು, ಎ. 9: ‘ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಯ ಪದಾಧಿಕಾರಿಗಳ ನೇಮಕಕ್ಕೆ ಪಕ್ಷದ ಹೈಕಮಾಂಡ್ ಅಂಕಿತ ಹಾಕಿದ್ದು, ಅಭಯ್‍ಚಂದ್ರ ಜೈನ್, ಪಿ.ಎಂ.ಅಶೋಕ್, ಬಿ.ಎನ್.ಚಂದ್ರಪ್ಪ, ಡಾ.ಎಲ್. ಹನುಮಂತಯ್ಯ ಸೇರಿದಂತೆ 40 ಮಂದಿ ಉಪಾಧ್ಯಕ್ಷರು ಹಾಗೂ 109 ಮಂದಿ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆದೇಶದ ಮೇರೆಗೆ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಶನಿವಾರ ಅಧಿಕೃತವಾಗಿ ಆದೇಶ ಹೊರಡಿಸಿದ್ದಾರೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಸಮಿತಿಗಳನ್ನು ವಿಸರ್ಜನೆ ಮಾಡಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿತ್ತು.

ಆ ವೇಳೆ ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವರನ್ನು ಉಳಿಸಿ ಉಳಿದ ಎಲ್ಲರ ಸ್ಥಾನವನ್ನು ವಿಸರ್ಜನೆ ಮಾಡಲಾಗಿತ್ತು. ಆ ಬಳಿಕ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಿ.ಕೆ.ಶಿವಕುಮಾರ್, ಎರಡೂವರೆ ವರ್ಷಗಳಿಂದ ಪದಾಧಿಕಾರಿಗಳ ನೇಮಕಕ್ಕಾಗಿ ಪ್ರಯತ್ನ ನಡೆಸಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ.

ಪದಾಧಿಕಾರಿಗಳ ಪಟ್ಟಿಯಲ್ಲಿ ಹಿಂದುಳಿದ ವರ್ಗ(ಒಬಿಸಿ)-53, ಪರಿಶಿಷ್ಟ ಜಾತಿ(ಎಸ್ಸಿ)-25, ಪರಿಶಿಷ್ಟ ಪಂಗಡ(ಎಸ್ಟಿ)-4, ಮಹಿಳೆಯರಿಗೆ-23, ಅಲ್ಪಸಂಖ್ಯಾತರು-22, ಲಿಂಗಾಯತರು-19, ರೆಡ್ಡಿ ಲಿಂಗಾಯತರು-5, ಒಕ್ಕಲಿಗರು-16 ಸೇರಿದಂತೆ ಒಟ್ಟು ಎಲ್ಲ ಸಮುದಾಯಗಳಿಗೂ ಪ್ರಾತಿನಿಧ್ಯ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.

ಉಪಾಧ್ಯಕ್ಷರು: ಬಸವರಾಜ ರಾಯರೆಡ್ಡಿ, ಡಿ.ಆರ್.ಪಾಟೀಲ್, ಡೆವಿಡ್ ಸಿಮೊನ್, ಬಿ.ಎಲ್.ಶಂಕರ್, ಡಾ.ಶರಣಪ್ರಕಾಶ್ ಪಾಟೀಲ್, ಜಿ.ಪದ್ಮಾವತಿ, ಜಿ.ಸಿ.ಚಂದ್ರಶೇಖರ್, ಎಚ್.ಆಂಜನೇಯ, ಎಚ್.ಎಂ.ರೇವಣ್ಣ, ಐವಾನ್ ಡಿಸೋಜಾ, ಪ್ರಮೋದ್ ಮದ್ವರಾಜ್, ಆರ್.ಬಿ.ತಿಮ್ಮಾಪುರ್, ಸಂತೋಷ್ ಲಾಡ್, ವಿ.ಎಸ್.ಉಗ್ರಪ್ಪ, ವಿನಯ್ ಕುಲಕರ್ಣಿ, ರಮಾನಾಥ್ ರೈ, ನಾಸೀರ್ ಹುಸೈನ್, ಮಧು ಬಂಗಾರಪ್ಪ, ವಿನಯ್ ಕುಮಾರ್ ಸೊರಕೆ ಸೇರಿದಂತೆ 40 ಮಂದಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿಗಳು: ಎ.ಸಿ.ಶ್ರೀನಿವಾಸ್, ಆಘಾ ಸುಲ್ತಾನ್, ಅಕೈ ಪದ್ಮಶಾಲಿ, ಹಲ್ಕೋಡು ಹನುಮಂತಪ್ಪ, ಅನಿಲ್ ಕುಮಾರ್ ಪಾಟೀಲ್, ಅನಿಲ್ ಕುಮಾರ್, ರಂಗಸ್ವಾಮಿಗೌಡ, ಚಂದ್ರಮೌಳಿ, ಬಿ.ಗುರಪ್ಪ ನಾಯ್ಡು, ಜಿ.ಎ.ಬಾವಾ, ಇನಾಯತ್ ಆಲಿ, ರುದ್ರಪ್ಪ ಲಮಾಣಿ ಸೇರಿದಂತೆ ಒಟ್ಟು 109 ಮಂದಿಯನ್ನು ಪ್ರಧಾನ ಕಾರ್ಯದರರ್ಶಿಗಳಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News