×
Ad

ಪ್ರಜಾಪ್ರಭುತ್ವದ ಹೆಸರಿನಲ್ಲಿ ಚುನಾವಣೆ ಮೂಲಕ ಭ್ರಷ್ಟಾಚಾರ ಗೆಲ್ಲುತ್ತಿದೆ: ಎಚ್.ಎನ್.ನಾಗಮೋಹನ್ ದಾಸ್

Update: 2022-04-09 21:15 IST

ಮೈಸೂರು,ಎ.9: ಇವತ್ತಿನ ಚುನಾವಣೆಗಳಲ್ಲಿ ಜಾತಿ, ಧರ್ಮ ಮತ್ತು ಹಣದ ಪ್ರಭಾವ ವ್ಯಾಪಕವಾಗಿ ಆವರಿಸಿದ್ದು, ಪ್ರಜಾಪ್ರಭುತ್ವದ ಹೆಸರಿನಲ್ಲಿ ಚುನಾವಣೆ ಮೂಲಕ ಭ್ರಷ್ಟಾಚಾರ ಗೆಲ್ಲುತ್ತಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನ ದಾಸ್ ಆತಂಕ ವ್ಯಕ್ತಪಡಿಸಿದರು.

ನಗರದ ಮಾನಸ ಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಶನಿವಾರ  ಅಬಿರುಚಿ ಪ್ರಕಾಶನ ಮತ್ತು ಭಾರತೀಯ ವಿದ್ಯಾರ್ಥಿ ಸಂಘ (ಬಿವಿಎಸ್) ಸಹಯೋಗದಲ್ಲಿ ಪ್ರೊ.ಪಿ.ವಿ.ನಂಜರಾಜ ಅರಸು ಅವರ “ಟೀಪೂ ಮಾನ್ಯತೆ ಸಿಗದ  ಸುಲ್ತಾನ್” ಅಂದು:ಇಂದು ಕೃತಿ ಲೋಕಾರ್ಪಣೆಗೊಳಿಸಿ ನಂತರ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ಅಂದರೆ ಚುನಾವಣೆಗಳು,  ಚುನಾವಣೆ ಎಂದರೆ ಪ್ರಜಾಪ್ರಭುತ್ವ ನಾನು ಅನೇಕ ಚುನಾವಣೆಗಳನ್ನು ನೋಡಿದ್ದೇನೆ ಮತ್ತು ಭಾಗವಹಿಸಿದ್ದೇನೆ ಆದರೆ ಈವತ್ತಿನ ಚುನಾವಣೆಗಳು ಆತಂಕ ಉಂಟು ಮಾಡುತ್ತಿವೆ. ಇಂದಿನ ಚುನಾವಣೆಗಳು ಜಾತಿ, ಧರ್ಮ ಮತ್ತು ಹಣದ ಪ್ರಭಾವವನ್ನು ವ್ಯಾಪಕವಾಗಿ ಆವರಿಸಿವೆ.  ಪ್ರಜಾಪ್ರಭುತ್ವದ ಹೆಸರಿನಲ್ಲಿ ಚುನಾವಣೆ ಮೂಲಕ ಭ್ರರಷ್ಟಾಚಾರ ಗೆಲ್ಲುತ್ತಿದೆ. ಹೆಗಲ ಮೇಲೆ ಹಣದ ಬ್ಯಾಗು ಹಾಕಿಕೊಂಡಿರುವವರು ಗೆಲ್ಲುತ್ತಿದ್ದಾರೆ. ಅಪರಾಧಿಕರಣ ಕೋಮುವಾದ ಸರ್ವಾಧಿಕರಣ ಗೆಲ್ಲುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾವನಾತ್ಮಕ ಸಂಗತಿಗಳಾದ ಭಗವದ್ಗೀತೆ ರಾಷ್ಟ್ರೀಯ ಗ್ರಂಥ, ಘರ್ ವಾಪಸಿ, ದನದ ಮಾಂಸ, ಲವ್ ಜಿಹಾದ್, ಹಲಾಲ್, ಅಜಾನ್ ವಿಚಾರಗಳನ್ನು ತಂದರು ಮುಂದೆ 15 ದಿನದಲ್ಲಿ ಮತ್ತೊಂದು ಮುನ್ನೆಲೆಗೆ ಬರಲಿದೆ. ಆದರೆ, ಬದುಕಿಗೆ ಬೇಕಾಗಿರುವ ಅನ್ನ, ಅಕ್ಷರ, ಆರೋಗ್ಯ, ಉದ್ಯೋಗ ಸಂಗತಿಗಳ ಬಗ್ಗೆ ಯಾರು ಮಾತಾಡುತ್ತಿಲ್ಲ, ಜಾತಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಹೊಡೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶ ಸಂಕಷ್ಟದಲ್ಲಿದೆ. ಇವತ್ತಿನ ಪಾರ್ಲಿಮೆಂಟ್  ಆಸೆಂಬ್ಲಿ ನಡೆದುಕೊಳ್ಳುತ್ತಿರುವ ರೀತಿ ನೋಡಿದರೆ ಪ್ರಜಾಪ್ರಬುತ್ವ ಇದಿಯೇ ಎನಿಸುತ್ತಿದೆ. ಬೆಲೆ ಏರಿಕೆ ಬಗ್ಗೆ ಚರ್ಚೆ ಮಾಡೋಣ ಅಂದರೆ ಪಾರ್ಲಿಮೆಂಟ್ ಬಾಗಿಲು ಹಾಕಿಕೊಂಡು ಹೋಗುತ್ತದೆ. ಪ್ರತಿ ದಿನ ಗದ್ದಲ ಕೂಗಾಟಗಳೇ ನಡೆಯುತ್ತಿದೆ.

ಇವತು ಕತ್ತಲೆ ಆವರಿಸಿದೆ. ಕತ್ತಲೆಯನ್ನು ದೂರ ಮಾಡುವ ಕೆಲಸವನ್ನು ಸಾಹಿತಿಗಳು ಸೇರಿದಂತೆ ಎಲ್ಲರೂ ಮಾಡಬೇಕಿದೆ. ಅಂತಹ ಕಾರ್ಯಗಳನ್ನು ಪ್ರೊ.ಪಿ.ವಿ.ನಂಜರಾಜ ಅರಸು ಅಂತವರು ಮಾಡುತ್ತಿದ್ದಾರೆ. ಟಿಪ್ಪು ಬಗ್ಗೆ ಇದ್ದಂತಹ ಅನೇಕ ಮಿತ್ತುಗಳನ್ನು ಸಾಕ್ಷ್ಯ ಆಧಾರದ ಮೇಲೆ  ಹೊಡೆದು ದೂಳಿಪಟ ಮಾಡಿದ್ದಾರೆ. ಹೊಸ ಕಣ್ಣೋಟವನ್ನು ಕಟ್ಟಿದ್ದಾರೆ  ಮತ್ತು ಹೊಸ ಬೆಳಕನ್ನು ನೀಡಿದ್ದಾರೆ ಎಂದು ಹೇಳಿದರು.

ನಿವೃತ್ತ ಪೊಲಿಸ್ ಅಧಿಕಾರಿ ಬಿ.ಕೆ.ಶಿವರಾಂ ಮಾತನಾಡಿ, ಬಿಜೆಪಿ, ಭಜರಂಗದಳ, ಸಂಘಪರಿವಾರ ಸೇರಿದಂತೆ ಹಿಂದೂಪರ ಸಂಘಟನೆಗ ಕೋಮುವಾದ ಗೋಹತ್ಯೆ, ಮತಾಂತರ, ಹಿಜಾಬ್, ಅಜಾನ್ ಆಯಿತು. ಈಗ ಮಾವಿನ ಹಣ್ಣಿಗೆ ಬಂದು ನಿಂತಿದೆ ಮುಂದೆ ಮಾಲ್‍ಗಳಿಗೆ ಬುರ್ಕಾ ಹಾಕಿಕೊಂಡು ಬರಬರಾದು ಎಂದು ಹೇಳುತ್ತಾರೆ. ಇವರು ಟಿಪ್ಪುವನ್ನು ವಿರೋಧಿಸುತ್ತಾರೆ. ಅಲ್ಪಸಂಖ್ಯಾತರ ಮೇಲೆ ಒತ್ಡಡ ಹೇರುತ್ತಾರೆ. ಆದರೆ ಇವರ ಅಂತಿಮ ಉದ್ದೇಶ ಸಂವಿಧಾನ ಮತ್ತು ಮೀಸಲಾತಿಯನ್ನು ಬದಲಾಯಿಸುವುದಾಗಿದೆ. ಹಾಗಾಗಿ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಕೃತಿ ಕುರಿತು ಮೈಸೂರು ವಿ.ವಿ. ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್, ಬಿವಿಎಸ್ ಮುಖಂಡ ಸೋಸಲೆ ಸಿದ್ದರಾಜು, ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್, ಕೃತಿಯ ಕರ್ತೃ ಪ್ರೊ.ಪಿ.ವಿ.ನಂಜರಾಜ ಅರಸು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News