×
Ad

ಬಿಜೆಪಿಯಲ್ಲಿ ಮುಖ್ಯಮಂತ್ರಿಯೂ ಟಿಕೆಟ್ ಕಳೆದುಕೊಳ್ಳುವ ಅಪಾಯ ಇದೆ: ಸಿದ್ದರಾಮಯ್ಯ

Update: 2022-04-09 22:38 IST

ಬೆಂಗಳೂರು: 'ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ನಿಗದಿಪಡಿಸಿರುವ ಮಾನದಂಡಗಳನ್ನು ಗಮನಿಸಿದರೆ ಬಿಜೆಪಿಗೆ ಅಭ್ಯರ್ಥಿಗಳ ತತ್ವಾರ ಉಂಟಾಗುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,  ' ಬಿಜೆಪಿಗೆ ನುಡಿದಂತೆ ನಡೆದು ಅಭ್ಯಾಸವಿರಬೇಕಲ್ಲ? ಟಿಕೆಟ್ ಪಡೆದುಕೊಳ್ಳಲು ಬಿಜೆಪಿ ಹೈಕಮಾಂಡ್ ನಿಗದಿಪಡಿಲು ಯೋಚಿಸುತ್ತಿರುವ ಮಾನದಂಡಗಳಾದ ಕಾರ್ಯವೈಖರಿ, ಜನರ ಸಮಸ್ಯೆಗೆ ಸ್ಪಂದಿಸುವ ಗುಣ ಮತ್ತು ಜನಪ್ರಿಯತೆಯ ಪರೀಕ್ಷೆಯಲ್ಲಿ ರಾಜ್ಯ ಬಿಜೆಪಿಗೆ ಸೇರಿದ ಯಾವೊಬ್ಬ ಹಾಲಿ ಶಾಸಕನಾದರೂ ಪಾಸಾಗಲು ಸಾಧ್ಯವೇ?' ಎಂದು ಪ್ರಶ್ನಿಸಿದ್ದಾರೆ.  

'ಕಾರ್ಯನಿರ್ವಹಣೆ, ಸುಧಾರಣೆ, ಬದಲಾವಣೆಗಳ ಮಾನದಂಡದ ಮೂಲಕ ಬಿಜೆಪಿ ಸಚಿವರ ಟಿಕೆಟ್ ಪಡೆಯುವ ಅರ್ಹತೆಯನ್ನು ತೀರ್ಮಾನಿಸಲಿದೆಯಂತೆ. ಈ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿದರೆ ಸಚಿವರ ಜೊತೆಯಲ್ಲಿ ಮುಖ್ಯಮಂತ್ರಿಗಳೂ ಟಿಕೆಟ್ ಕಳೆದುಕೊಳ್ಳುವ ಅಪಾಯ ಇದೆ' ಎಂದು ಹೇಳಿದ್ದಾರೆ.

' 40%ಗಿಂತ ಹೆಚ್ಚು ಕಮಿಷನ್ ಪಡೆದವರು, ಹಿಜಾಬ್, ಹಲಾಲ್, ಮೊದಲಾದ ವಿವಾದಗಳಿಂದ ಸಮಾಜದಲ್ಲಿ ಹೆಚ್ಚು ವೈಷಮ್ಯವನ್ನು ಹುಟ್ಟಿಸಿದವರು ಮತ್ತು ಅತೀ ಹೆಚ್ಚು ಸುಳ್ಳು ಹೇಳಿದವರು ಯಾರು ಎಂಬ  ಮಾನದಂಡಗಳನ್ನು ನಿಗದಿಪಡಿಸಿದರೆ ಬಿಜೆಪಿಯ ಹಾಲಿ ಶಾಸಕರಿಗೆಲ್ಲರಿಗೂ ಟಿಕೆಟ್ ಖಚಿತ' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News