ಇವರ ಹಿಂದಿ ಭಜನೆಯೇ ಏಕತೆಗೆ ನಿಜವಾದ ಕಂಟಕ: ಕವಿರಾಜ್ ಆಕ್ರೋಶ

Update: 2022-04-10 06:02 GMT

ಬೆಂಗಳೂರು: 'ಹಿಂದಿ ಭಜನೆಯೇ ಏಕತೆಗೆ ನಿಜವಾದ ಕಂಟಕ' ಎಂದು ಕನ್ನಡ ನಿರ್ದೇಶಕ, ಚಿತ್ರ ಸಾಹಿತಿ ಕವಿರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ದೇಶದೆಲ್ಲೆಡೆ ಸಂಪರ್ಕ ಭಾಷೆಯಾಗಿ ದೇಶೀಯ ಭಾಷೆಯಾದ ಹಿಂದಿಯನ್ನು ಬಳಸಬೇಕು. ವಿದೇಶಿ ಭಾಷೆಯನ್ನಲ್ಲ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ  ಅವರ ಹೇಳಿಕೆಗೆ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ಇದೀಗ  ಫೇಸ್ ಬುಕ್ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಕವಿರಾಜ್ ಅವರು ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.  

'ವೈವಿಧ್ಯತೆಯಲ್ಲಿ ಏಕತೆಯನ್ನು ಭಾರತ ತನ್ನ ಹುಟ್ಟಿನಿಂದಲೇ ಕಂಡುಕೊಂಡಿದೆ.  ಈ ಒಕ್ಕೂಟದ ಭದ್ರ ಅಡಿಪಾಯವೇ ಅದು. ಈ ದೇಶದಲ್ಲಿ ತಾನಾಗೇ ರಕ್ತಗತವಾಗಿರುವ ಏಕತೆಯನ್ನು ಈಗ ಮೂಡಿಸಬೇಕು ಎಂಬ ಮಾತುಗಳೇ ಅಪ್ರಸ್ತುತ. ಸುಮ್ಮನಿರಲಾಗದೇ ಕೆರೆದು ಹುಣ್ಣು ಮಾಡಿಕೊಂಡರು ಎಂಬಂತೆ ವಾಸ್ತವದಲ್ಲಿ ಏಕತೆ ಮೂಡಿಸುತ್ತದೆ ಎನ್ನುತ್ತಿರುವ ಇವರ ಹಿಂದಿ ಭಜನೆಯೇ ಏಕತೆಗೆ ನಿಜವಾದ ಕಂಟಕ' ಎಂದು ಕವಿರಾಜ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News