×
Ad

VIDEO- ತುಮಕೂರು: ತಹಶೀಲ್ದಾರ್ ಕಾಲು ಹಿಡಿದು ಕಣ್ಣೀರು ಹಾಕಿದ ರೈತ

Update: 2022-04-10 12:56 IST

ತುಮಕೂರು: ರೈತರೊಬ್ಬರು ತಹಶೀಲ್ದಾರ್ ಕಾಲು ಹಿಡಿದು ಕಣ್ಣೀರು ಹಾಕಿದ ಘಟನೆ ಇತ್ತೀಚೆಗೆ ನಡೆದಿದ್ದು, ಇದೀಗ ಈ ಕುರಿತ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ನಾಗವಲ್ಲಿಯ ರೈತ ಮುನಿಯಪ್ಪ, ಹಲವು ವರ್ಷಗಳಿಂದ ಅನುಭವದಲ್ಲಿದ್ದ ಜಮೀನಿಗೆ ಸಾಗುವಳಿ ಚೀಟಿ ಸಹ ಪಡೆದಿದ್ದರು. ಆ ಸಾಗುವಳಿ ಪತ್ರದಲ್ಲಿನ ದೋಷಗಳನ್ನು ಸರಿಪಡಿಸುವಂತೆ ಹಲವು ದಿನಗಳಿಂದ ತುಮಕೂರು ತಾಲೂಕು ಕಚೇರಿಗೆ ಅಲೆದಾಡಿದ್ದರು.

ಆದರೆ ಅಲ್ಲಿನ ತಾಲೂಕು ಅಧಿಕಾರಿ ಹಾಗೂ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸದೇ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್ ಅವರ ಕಾಲಿಗೆರಗಿ ಅವರ ಕಾಲುಗಳನ್ನು ಹಿಡಿಯುತ್ತಾ ತನಗೆ ನ್ಯಾಯ ದೊರಕಿಸಿಕೊಡುವಂತೆ ಕೇಳಿಕೊಂಡಿದ್ದಾರೆ.  

ಮುನಿಯಪ್ಪ ತನ್ನ ನೋವನ್ನು ಹೊರಹಾಕುತ್ತಾ ಕಣ್ಣೀರು ಹಾಕಿದ್ದನ್ನು ಗಮನಿಸಿದ ಅಧಿಕಾರಿಗಳು ಸಮಾಧಾನಪಡಿಸಿ ತನಗೆ ಆಗಬೇಕಾದ ಕೆಲಸವನ್ನು ಶ್ರೀಘ್ರದಲ್ಲೇ ಮಾಡಿಕೊಡುವ ಬಗ್ಗೆ ಭರವಸೆ ನೀಡಿದ್ದಾರೆ.

ಸದ್ಯ ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಾದ್ಯಂತ ವೈಲ್ ಆಗಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News