×
Ad

ವ್ಯಾಪಾರ ಮಾಡುವ ಹಕ್ಕು ಎಲ್ಲರಿಗೂ ಇದೆ, ಅಂಗಡಿಗಳನ್ನು ಟಾರ್ಗೆಟ್​ ಮಾಡುವುದು ಸರಿಯಲ್ಲ: ಸಚಿವ ಮಾಧುಸ್ವಾಮಿ

Update: 2022-04-10 15:32 IST
ಸಚಿವ ಜೆ.ಸಿ. ಮಾಧುಸ್ವಾಮಿ

ಬೆಳಗಾವಿ: ಹಿಂದೂಯೇತರರ ವ್ಯಾಪಾರಕ್ಕೆ ನಿರ್ಬಂಧ ಹೇರುವ ಸಂಘಪರಿವಾರ ಕಾರ್ಯಕರ್ತರ ಅಭಿಯಾನದ ಕುರಿತು  ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ. 

''ಮುಸ್ಲಿಮ್ ವ್ಯಾಪಾರಿಗಳ ಬ್ಯಾನ್ ಅಭಿಯಾನದ ಬಗ್ಗೆ ವ್ಯಾಪಾರ ಮಾಡುವ ಹಕ್ಕು ಎಲ್ಲರಿಗೂ ಇದೆ. ಅಂಗಡಿಗಳನ್ನು ಟಾರ್ಗೆಟ್​ ಮಾಡುವುದು ಸರಿಯಲ್ಲ'' ಎಂದು ತಿಳಿಸಿದ್ದಾರೆ.

'ಯಾರಿಗಾದ್ರೂ ತೊಂದರೆ ಕೊಡುವುದು, ಶಾಂತಿ ಕದಡುವುದು ಯಾರು ಮಾಡಿದರೂ ಗೌರವ ಬರುವುದಿಲ್ಲ. ಅದರಲ್ಲೂ ಆಡಳಿತ ಪಕ್ಷಕ್ಕಂತೂ ಗೌರವ ಬರುವುದಿಲ್ಲ ' ಎಂದು ತಿಳಿಸಿದರು. 

''ಹಿಂದೂಪರ ಸಂಘಟನೆಗಳು ಯಾಕೆ ಈ ರೀತಿ ಮಾಡುತ್ತಿದೆ ಎಂದು ಗೊತ್ತಿಲ್ಲ, ಎಲ್ಲರೂ ಈ ದೇಶದ ಮಕ್ಕಳೇ.  ಇಲ್ಲಿ ಎಲ್ಲರೂ ಭಾರತೀಯರೇ. ಎಲ್ಲೆಲ್ಲೋ ಆದ ಘಟನೆಯನ್ನು ಸರ್ಕಾರ ನೋಡೋಕಾಗಲ್ಲ. ಗಮನಕ್ಕೆ ಬಂದ ಕೂಡಲೇ ಕ್ರಮ ಕೈಗೊಳ್ಳುತ್ತೇವೆ'' ಎಂದು ಹೇಳಿದರು.

ಮುಖ್ಯಮಂತ್ರಿ ಬಸಲಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವರು, 'ಸದ್ಯಕ್ಕೆ ಅಂಥ ಚರ್ಚೆಗಳು ಆಗುತ್ತಿಲ್ಲ, ಅದೆಲ್ಲ ಊಹಾಪೋಹ' ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News