ರೋಪ್ ವೇ ನಿರ್ಮಾಣ ಆದರೆ ಚಾಮುಂಡಿ ಬೆಟ್ಟಕ್ಕೆ ಅಪಾಯ: ಸಂಸದ ವಿ.ಶ್ರೀನಿವಾಸ ಪ್ರಸಾದ್

Update: 2022-04-10 15:06 GMT
 ವಿ.ಶ್ರೀನಿವಾಸ ಪ್ರಸಾದ್ 

ಮೈಸೂರು,ಎ.10: 'ರೋಪ್ ವೇ ನಿರ್ಮಾಣ ಆದರೆ ಚಾಮುಂಡಿ ಬೆಟ್ಟಕ್ಕೆ ಅಪಾಯ' ಎಂದಿರುವ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು  ರೋಪ್ ವೇ ನಿರ್ಮಾಣಕ್ಕೆ  ವಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕೃತಿದತ್ತ ಚಾಮುಂಡಿ ಬೆಟ್ಟದ ಪರಿಸರ ಹಾಳು ಮಾಡೋದು ಬೇಡ. ಕಣಿವೆ ಪ್ರದೇಶ, ವಾಹನ ಸಂಚಾರವಿಲ್ಲದ ಕಡೆಗೆ ಮಾತ್ರ ರೋಪ್ ವೇ ಅಳವಡಿಸುತ್ತಾರೆ. ಕೇವಲ 20ನಿಮಿಷಕ್ಕೆ ಹೋಗುವ ಬೆಟ್ಟಕ್ಕೆ ರೋಪ್ ವೇ ಏಕೆ ಎಂದು ಪ್ರಶ್ನಿಸಿದ್ದಾರೆ.

ಬೆಟ್ಟಕ್ಕೆ ಉತ್ತಮವಾದ ಮೆಟ್ಟಿಲುಗಳಿವೆ, ವಿಶಾಲ ರಸ್ತೆ ಇದೆ ಮತ್ಯಾಕೆ ರೋಪ್ ವೇ ? ಕೇವಲ ಮೂಲಭೂತ ಸೌಕರ್ಯಗಳನ್ನು ಮಾತ್ರ ನೀಡಿ ಸಾಕು. ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ಕೊಡಬೇಡಿ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಜಿಲ್ಲಾ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ವಸ್ತುಸ್ಥಿತಿ ಅರ್ಥ ಮಾಡಿಸಬೇಕು. ನಾನು ಕೂಡಾ ಈ ಬಗ್ಗೆ ಪತ್ರ ಬರೆದಿದ್ದೇನೆ. ಸರ್ಕಾರಕ್ಕೆ ಮನವರಿಕೆ ಮಾಡಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News