ಓ ಮೆಣಸೇ...

Update: 2022-04-10 18:35 GMT

ಕರ್ನಾಟಕದಲ್ಲಿರುವುದು ಮೌನಿ ಸರಕಾರ ಮತ್ತು ಮೌನಿ ಮುಖ್ಯಮಂತ್ರಿ -ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಹಿಂಸೆ, ಅಕ್ರಮ, ಭ್ರಷ್ಟಾಚಾರ ಇತ್ಯಾದಿಗಳಿಗೆ ಅವರು ನೀಡುತ್ತಿರುವ ಸಕ್ರಿಯ ಹಾಗೂ ಬಹಿರಂಗ ಸಹಕಾರವನ್ನು ಮೌನ ಅಂತ ಹೊಗಳ್ತಿದ್ದೀರಾ?

ಕಾಶ್ಮೀರಿ ಪಂಡಿತರು ಶೀಘ್ರದಲ್ಲಿಯೇ ತಮ್ಮ ಮೂಲ ನೆಲೆಗಳಿಗೆ ಹೋಗುವ ದಿನಗಳು ಸಮೀಪಿಸುತ್ತಿವೆ -ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಎಲ್ಲಿಂದಲೋ ಬಂದ ಆರ್ಯನರು ತಮ್ಮ ಮೂಲ ನೆಲೆಗಳಿಗೆ ಮರಳಿ ಹೋಗಲಿದ್ದಾರೆಂಬುದಕ್ಕೆ ಇದು ಟ್ರೇಲರ್ ಅಲ್ಲತಾನೇ?

ಚಾಲಾಕಿ ಸಚಿವ ಸುನೀಲ್ ಕುಮಾರ್ ಹಿಂದಿನ ಜನ್ಮದಲ್ಲಿ ಮಾರ್ವಾಡಿಯಾಗಿದ್ದರೋ ಏನೋ ಅನಿಸುತ್ತಿದೆ -ಈಶ್ವರಪ್ಪ, ಸಚಿವ
ಇಂದಿನ ಜನ್ಮದಲ್ಲಿ ನೀವು ಮನುಷ್ಯರಾಗಿಲ್ಲ ಎಂಬ ಬಗ್ಗೆ ಮಾತ್ರ ಯಾರಿಗೂ ಸಂದೇಹವೇ ಇಲ್ಲ.

ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರು, ಮುಖಂಡರು ಬಿಜೆಪಿ ಸೇರುವ ಇಂಗಿತ ವ್ಯಕ್ತ ಪಡಿಸುತ್ತಿದ್ದಾರೆ -ಸದಾನಂದ ಗೌಡ, ಬಿಜೆಪಿ ನಾಯಕ
ಅವರು ಅಲ್ಲೇ ಇದ್ದುಕೊಂಡು ಹೆಚ್ಚು ಪರಿಣಾಮಕಾರಿಯಾಗಿ ಬಿಜೆಪಿಯ ಸೇವೆ ಮಾಡುತ್ತಿರುವಾಗ ಸುಮ್ಮನೆ ಡಿಸ್ಟರ್ಬ್ ಮಾಡಬೇಡಿ.

ಉದ್ಯಮಿಗಳು ಮೊದಲು ನಾವು ಭಾರತೀಯರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು -ಡಾ.ಅಶ್ವತ್ಥನಾರಾಯಣ, ಸಚಿವ
ಇದೀಗ ಉದ್ಯಮಿಗಳು ರಾಜಕಾರಣಿಗಳಿಂದ ಆ ಭಾವನೆಯನ್ನು ನಿರೀಕ್ಷಿಸುತ್ತಿದ್ದಾರೆ.

ಸಮಾಜದಲ್ಲಿನ ಇತ್ತೀಚಿನ ಕೆಲ ಬೆಳವಣಿಗೆಗಳಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ -ನಳಿನ್ ಕುಮಾರ್ ಕಟೀಲು, ಸಂಸದ
ಗೃಹ ಸಚಿವರಿಗೇನಾದರೂ ಸಂಬಂಧ ಇದೆಯೇ ಎಂದು ವಿಚಾರಿಸಿ.

ನಮ್ಮ ದಿನಚರಿಯನ್ನು ಅವಲೋಕಿಸಿದರೆ ನಾವು ನಾವಾಗಿ ಉಳಿದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ -ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ
ಹೌದು. ನಿಮ್ಮ ದಿನಚರಿ ಅವಲೋಕಿಸುವಾಗ ಭಕ್ತರಿಗೂ ಅದು ಸ್ಪಷ್ಟವಾಗಿದೆ.

ಶೂದ್ರ ಪದವನ್ನು ನಿಘಂಟುಗಳಿಂದ ಕಿತ್ತು ಹಾಕಿ -ಹಂಸಲೇಖ, ಸಂಗೀತ ನಿರ್ದೇಶಕ
ಆದರೆ ಮೆದುಳಿನಿಂದ ಕಿತ್ತು ಹಾಕುವುದು ಕಷ್ಟ.

ಎಲ್ಲರೂ ಧರ್ಮದ ಹಾದಿಯಲ್ಲಿ ನಡೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ -ಯಡಿಯೂರಪ್ಪ, ಮಾಜಿ ಸಿಎಂ
ಅಧಿಕಾರ ಪಡೆಯುವ ತುರ್ತಿನಲ್ಲಿ ಧರ್ಮ ಬಿಟ್ಟು ಸಂಘದ ಹಿಂದೆ ಹೋದವರ ಅನುಭವದ ಮಾತೇ ಇದು?

ಪಕ್ಷಕ್ಕೆ ಹಿಂದೆಂದಿಗಿಂತಲೂ ಅತ್ಯಂತ ಸವಾಲಿನ ದಿನಗಳು ಮುಂದಿವೆ -ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ
ಡೀಸೆಂಟ್ ಅಂತ್ಯಕ್ರಿಯೆ ಹೇಗೆಂಬ ಸವಾಲೇ?

ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವುದು ಪುಣ್ಯದ ಕೆಲಸ -ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭೆ ಸ್ಪೀಕರ್
ಅಲ್ಲೂ ಅನಾರೋಗ್ಯ ಹಬ್ಬುವ ಸಂಚು ಸಿದ್ಧವಾಗಿದೆಯೇ?

ಸಿಎಂ ಬೊಮ್ಮಾಯಿ ಮೂಕ ಬಸವನಂತಾಗಿದ್ದಾರೆ -ಪ್ರಿಯಾಂಕ್ ಖರ್ಗೆ, ಶಾಸಕ
ತನ್ನನ್ನು ಒಂದು ಕ್ರೂರ ಪ್ರಾಣಿಗೆ ಹೋಲಿಸಿದ್ದು ಗೊತ್ತಾದರೆ ಮುಗ್ಧ ಬಸವ ನಿಮಗೆ ಹಾಯುವುದು ಖಚಿತ.

ಜಿಲ್ಲೆಗೊಂದು ಗೋಶಾಲೆ ಎಲ್ಲ ಜಿಲ್ಲೆಗಳಲ್ಲಿ ಜೂ.23ರೊಳಗೆ ಅನುಷ್ಠಾನ ಆಗದಿದ್ದರೆ ಅಧಿಕಾರಿಗಳ ತಲೆದಂಡ ಖಚಿತ -ಪ್ರಭು ಚವ್ಹಾಣ್, ಸಚಿವ
ಸರಕಾರಿ ಶಾಲೆಗಳನ್ನೇ ಗೋಶಾಲೆ ಮಾಡುವ ಉದ್ದೇಶವಿರಬೇಕು.

ಸರಕಾರಿ ನೌಕರರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಬೇಕು -ಮಹೇಶ್ ಜೋಶಿ, ಕಸಾಪ ಅಧ್ಯಕ್ಷ
ಕಸಾಪ ಅಧ್ಯಕ್ಷರು ಮತ್ತು ಸದಸ್ಯರ ಮಕ್ಕಳು ಕನ್ನಡ ಶಾಲೆಗಳಲ್ಲಿ ಕಲಿಯುವುದು ಬೇಡವೇ?

ಕನ್ನಡ ಮಾಧ್ಯಮದ ಮಕ್ಕಳಿಗೆ ಇಂಗ್ಲಿಷ್ ಭಾಷೆ ಪರಿಚಯಿಸುವ ಹಾಗೂ ಆಂಗ್ಲ ಮಾಧ್ಯಮದ ಮಕ್ಕಳಿಗೆ ಕನ್ನಡ ಕಲಿಸುವ ಪಾಠ ಅಗತ್ಯವಿದೆ -ಎಸ್.ಎಲ್.ಬೈರಪ್ಪ, ಸಾಹಿತಿ
ಕನ್ನಡದಲ್ಲಾಗಲಿ, ಇಂಗ್ಲಿಷಲ್ಲಾಗಲಿ ನಿಮಗೆ ಮಾನವೀಯತೆಯ ಪಾಠ ಕಲಿಸುವ ಅಗತ್ಯವಂತೂ ಇದೆ.

ಬಿಜೆಪಿ ಸಂಸದರು ತಮ್ಮನ್ನು ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು -ನರೇಂದ್ರ ಮೋದಿ, ಪ್ರಧಾನಿ
ಸೇವೆ ಎನ್ನುವುದು ಲೂಟಿಯ ಪರ್ಯಾಯ ಪದವೇ?

1857ರ ಪ್ರಥಮ ಸ್ವಾತಂತ್ರ ಹೋರಾಟ ರೈತರ ಸ್ವಾಭಿಮಾನದ ಸಂಕೇತ -ಅಂಗಾರ, ಸಚಿವ
ಆ ಸ್ವಾಭಿಮಾನವನ್ನು ನೀವೇಕೆ ಆರೆಸ್ಸೆಸ್‌ಗೆ ಒತ್ತೆ ಇಟ್ಟಿದ್ದೀರಿ?

ರಾಜಕಾರಣಿಗಳು ರಾವಣನ ವಂಶಜರು -ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆಯ ಮುಖ್ಯಸ್ಥ
ಬೀದಿನಾಯಿಗಳ ವಂಶಸ್ಥರು ಯಾರಬಗ್ಗೆ ಏನಂದ್ರೂ ಯಾರೂ ಕೇರ್ ಮಾಡಲ್ಲ.

ಪೆಟ್ರೋಲ್, ಡೀಸೆಲ್ ಬೆಲೆ ದಿನೇದಿನೇ ಏರಿಕೆಯಾಗುತ್ತಿರುವು ದರಿಂದ ದೇಶದಲ್ಲಿ ದಂಗೆಯಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ
-ಸುಬ್ರಮಣಿಯನ್ ಸ್ವಾಮಿ, ರಾಜ್ಯಸಭೆ ಸದಸ್ಯ
ಪೆಟ್ರೋಲ್ ಬೆಲೆ ಏರಿಕೆಗೆ ಇಲ್ಲಿ ದಂಗೆ ಆಗುವುದಿಲ್ಲ. ದಂಗೆ ಏನಿದ್ದರೂ ಧರ್ಮ ಜಾತಿ ವಿಷಯಕ್ಕಷ್ಟೇ ಸೀಮಿತ.

ಅಧಿಕಾರ ಶಾಶ್ವತವಾಗಿರಬೇಕು ಎನ್ನಲು ಅದು ತಾತನಿಂದ ಬಂದ ಆಸ್ತಿಯಲ್ಲ -ಮುರುಗೇಶ್ ನಿರಾಣಿ, ಸಚಿವ
ಶಾಶ್ವತ ಅಲ್ಲ ಎನ್ನುವ ಕಾರಣಕ್ಕೆ ಆಸ್ತಿ ಮಾಡುತ್ತಿರುವುದೇ ?

ಉಕ್ರೇನ್-ರಶ್ಯ ಸಂಘರ್ಷದ ನಡುವೆ ಭಾರತ ಕೇವಲ ಶಾಂತಿಯ ಕಡೆಗೆ ವಾಲಿದೆ -ಜೈಶಂಕರ್, ಕೇಂದ್ರ ಸಚಿವ
ಆ ಶಾಂತಿ ಭಾರತದೊಳಗೂ ಇರಗೊಡಲು ಬಿಡಿ.

ಇಡೀ ಜಗತ್ತಿಗೆ ಧರ್ಮವನ್ನು ತಿಳಿಸಿಕೊಟ್ಟ ದೇಶ ಭಾರತ -ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ
ಧರ್ಮವನ್ನು ರಫ್ತು ಮಾಡಿ ಅಧರ್ಮವನ್ನು ಉಳಿಸಿ ಕೊಂಡ ಭಾರತ ಎಂದರೆ ಚೆನ್ನಾಗಿರುತ್ತದೆ.

ಬಿಜೆಪಿಯಲ್ಲಿ ಯಾವುದೂ ಶಾಶ್ವತ ಅಲ್ಲ -ಸಿ.ಟಿ.ರವಿ, ಶಾಸಕ

ವಿಶೇಷವಾಗಿ ಮಾನ ಮರ್ಯಾದೆ. ಆರೆಸ್ಸೆಸ್ ಬಗ್ಗೆ ಅನುಮಾನ ಇರುವವರು ಅದರ ಸ್ವಯಂಸೇವಕರ ಜೊತೆ ಒಂದು ದಿನ ಕಳೆಯಬೇಕು-ಡಾ.ಸುಧಾಕರ, ಸಚಿವ
ಸೋಂಕು ಅಷ್ಟು ಬೇಗ ತಗಲಿ ಬಿಡುತ್ತದೆಯೇ?

ರಾಜ್ಯದಲ್ಲಿ ಬಿಜೆಪಿ ಅತಿರೇಕದ ರಾಜಕಾರಣ ಮಾಡುತ್ತಿದೆ -ಎಂ.ಬಿ.ಪಾಟೀಲ್, ಕಾಂಗ್ರೆಸ್ ಮುಖಂಡ
ಇಲ್ಲೊಂದು ಪ್ರತಿಪಕ್ಷ ಇಲ್ಲವೇ ಇಲ್ಲ ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದೆ.

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...