ಹುಬ್ಬಳ್ಳಿ: ಎಸ್ ಐಒ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ
ಹುಬ್ಬಳ್ಳಿ : 'ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ' ವತಿಯಿಂದ ಇಲ್ಲಿಯ ಸನಾ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಯಿತು.
ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದ ಜಮಾತ್ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಜೊತೆ ಕಾರ್ಯದರ್ಶಿ ರಿಯಾಝ್ ಅಹ್ಮದ್, 'ಇಂದು ಧರ್ಮದ ಹೆಸರಿನಲ್ಲಿ ಅಧರ್ಮವು ತಾಂಡವವಾಡುತ್ತಿದೆ, ಇತರರನ್ನು ದ್ವೇಷಿಸುವವರಿಗೆ ಎಂದು ಪ್ರೀತಿ ಸಿಗಲಾರದು, ಬಹುಸಂಸ್ಕೃತಿಯ ದೇಶವಾಗಿರುವ ಭಾರತದಲ್ಲಿ ಎಲ್ಲರೂ ಪರಸ್ಪರರನ್ನು ಅರಿತು ಸೌಹಾರ್ದದಿಂದ ಬಾಳಿ ಬದುಕ ಬೇಕಾದಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ ಆದರೆ ದುರದೃಷ್ಟವಶಾತ್ ಇಂದು ಕೆಲವು ದುಷ್ಟಶಕ್ತಿಗಳು ಧರ್ಮವನ್ನು ಹೈಜಾಕ್ ಮಾಡಿರುವುದರಿಂದ ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟಾಗಿದೆ, ಆದ್ದರಿಂದ ಧರ್ಮದ ನೈಜ ತಿರುಳನ್ನು ಜನರಿಗೆ ತಲುಪಿಸುವ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ', ಈ ನಿಟ್ಟಿನಲ್ಲಿ ನಮ್ಮ ನಡುವೆ ಸಹಾನುಭೂತಿ ಹಾಗೂ ಸಹೋದರತೆಯನ್ನು ವ್ಯಾಪಕಗೊಳಿಸಲು ಸಹಕಾರಿಯಾಗಲಿ' ಎಂದು ತಿಳಿಸಿದರು.
'ಮನುಷ್ಯನು ಆತ್ಮ ನಿಯಂತ್ರಣದ ಮೂಲಕ ಯಶಸ್ಸನ್ನು ಸಾಧಿಸುತ್ತಾನೆ, ಉಪವಾಸದಿಂದ ಆತ್ಮ ನಿಯಂತ್ರಣ ಸಾಧ್ಯವಾಗುತ್ತದೆ' ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಮುಖ್ಯೋಪಾಧ್ಯಾಯ ಡಾ. ಸಂಜಯ್ ಭೊಲೇರಾವು, 'ಉಪವಾಸ ಆಚರಣೆಯಿಂದ ಮನುಷ್ಯನಿಗೆ ಆಧ್ಯಾತ್ಮಿಕ ಲಾಭಗಳ ಜೊತೆಗೆ ಶಾರೀರಿಕ ಲಾಭಗಳಿವೆ' ಎಂದು ಹೇಳಿದರು.
ಪ್ರಾರಂಭದಲ್ಲಿ ಎಸ್ ಐಒ ರಾಜ್ಯ ಸಲಹಾ ಸಮಿತಿಯ ಸದಸ್ಯ ಬ್ರ. ಫಿರಾಸತ್ ಮುಲ್ಲಾ, ಸ್ವಾಗತ ಹಾಗೂ ಪ್ರಾಸ್ತಾವಿಕ ಭಾಷಣಗೈದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹೊಣೆಗಾರರಾದ, ಜ.ತಾರೀಕ್ ಮುಜಾಹಿದ್, ಎಸ್ ಐಒ ಸ್ಥಾನೀಯ ಅಧ್ಯಕ್ಷ, ಬ್ರ.ಝ್ಯದ್, ಜ.ಶಕೀಲ್ ಅಹ್ಮದ್ ಉಪಸ್ಥಿತರಿದ್ದರು.