ಬೇಲೂರು: ಚನ್ನಕೇಶವ ರಥೋತ್ಸವದಲ್ಲಿ ಎಲ್ಲ ಧರ್ಮದವರಿಗೂ ವ್ಯಾಪಾರಕ್ಕೆ ಅವಕಾಶ

Update: 2022-04-13 04:22 GMT

ಬೇಲೂರು: ಎರಡು ದಿನಗಳ ಕಾಲ ನಡೆಯುವ ಐಸಿಹಾಸಿಕ ಬೇಲೂರು ಚನ್ನಕೇಶವ ರಥೋತ್ಸವ ವೇಳೆ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂಬ ವಿವಾದ ಬಗೆಹರಿದಿದೆ.

ಜಿಲ್ಲಾಡಳಿತವಾಗಲೀ, ಪುರಸಭೆಯಾ ಗಲೀ ಅಥವಾ ದೇವಾಲಯ ಆಡಳಿತ ಮಂಡಳಿಯಾಗಲಿ ಯಾವುದೇ ನಿರ್ಬಂಧ ವಿಧಿಸಿಲ್ಲ. ಷರತ್ತು ಕೂಡ ಹಾಕಿಲ್ಲ. ಹೀಗಾಗಿ ಮುಸ್ಲಿಮರು ಸೇರಿದಂತೆ ಎಲ್ಲರಿಗೂ ಮಳಿಗೆ ನೀಡಲಾ ಗಿದೆ ಎಂದು ಟೆಂಡರ್‌ದಾರ ಗಿರೀಶ್ ತಿಳಿಸಿದ್ದಾರೆ.

ಚನ್ನಕೇಶವ ಜಾತ್ರೆ ವೇಳೆ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರ ದೆಂದು  ಕೆಲವು ವ್ಯಕ್ತಿಗಳು  ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದರು. ಇದಾದ ಬಳಿಕ ಒಬ್ಬ ವ್ಯಾಪಾರಿಗೆ ಹಿಂದೆ ಗುತ್ತಿಗೆ ಪಡೆದಿದ್ದ ಮಳಿಗೆ ತೆರವು ಮಾಡುವಂತೆ ದೇವಾಲಯ ಸಮಿತಿ ನೋಟಿಸ್‌ನೀಡಿತ್ತು. 

ಚನ್ನಕೇಶವ ಜಾತ್ರೆ ಸಂದರ್ಭದಲ್ಲಿ ಮುಸ್ಲಿಂ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ಮುಂದೆ ವ್ಯಾಪಾರಕ್ಕೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಆ ಸಮುದಾಯದ ಒಬ್ಬರೂ ವ್ಯಾಪಾರಕ್ಕೆ ಮಳಿಗೆ ಪಡೆದಿಲ್ಲ. ಎಂಬುದು ದೊಡ್ಡ ಸುದ್ದಿಯಾಗಿತ್ತು. 

ಹಾಸನ ಜಿಲ್ಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು, ಅನೇಕ ಜಾತ್ಯತೀತ ಸಂಘಟನೆಗಳು ,   ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟ್, ಬಿಎಸ್ಸಿ ಪಕ್ಷಗಳು, ದಲಿತ ಸಂಘಟನೆಗಳು ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಧಾರ್ಮಿಕ ಅಲ್ಪಸಂಖ್ಯಾತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಸಭೆನಡೆಸಿ ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದವು. ಸೋಮವಾರ ಬೇಲೂರಿನಲ್ಲಿ ಸರ್ವಧರ್ಮವರು ಸೌಹಾರ್ದ ಜಾಥ ನಡೆಸಲಾಯಿತು.

ದೇವಾಲಯದ ಮುಂದೆ ಅಂಗಡಿ ಹಾಕಲು ಮೂರು ದಿನಕ್ಕೆ ಗಿರೀಶ್‌, ಸಿದೇಶ್ ಎಂಬುವರು 1.20 ಲಕ್ಷ ರೂ. ಗೆ ಗುತ್ತಿಗೆ ಪಡೆದುಕೊಂಡಿದ್ದಾರೆ. ಬುಧವಾರ ಕುರಾನ್ ಪಠಣ ನಂತರ ಚಿಕ್ಕತೇರಿಗೆ (ಗಳಿಗೆ ತೇರು) ಚಾಲನೆ ನೀಡಲಾಗುತ್ತದೆ.  ಮುಸ್ಲಿಮರು ಅಂಗಡಿ ಹಾಕಲು ಬಂದರೆ ದೇವಾಲಯದಿಂದ 100 ಅಡಿ ದೂರದಲ್ಲಿ ಜಾಗ ನೀಡುವಂತೆ ಸಂಬಂದ ಪಟ್ಟವರಿಗೆ ಸೂಚಿಸಲಾಗಿದೆ 

ಸ್ಥಳೀಯ ಶಾಸಕ  -ಕೆ.ಎಸ್.ಲಿಂಗೇಶ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News