×
Ad

ಇವರು ಹಿಂದೂ ಹೆಣ್ಣುಮಗಳು ಎನ್ನುವ ದೃಷ್ಟಿಯಲ್ಲಾದರೂ ನ್ಯಾಯ ಕೊಡಿಸಿ: ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಒತ್ತಾಯ

Update: 2022-04-13 20:25 IST

ಬೆಂಗಳೂರು: 'ಈ ಹೆಣ್ಣುಮಗಳ ನೋವಿಗೆ, ಕಣ್ಣೀರಿಗೆ ಬಿಜೆಪಿ ಸರ್ಕಾರದಲ್ಲಿ ಬೆಲೆ ಇಲ್ಲದಾಗಿದೆ, 'ಹೆಣ ರಾಜಕೀಯ' ಮಾಡುವ ಬಿಜೆಪಿಗೆ ಮನುಷ್ಯನ ಸಾವನ್ನು ಮಾನವೀಯತೆಯ ಬದಲು ಮತಬೇಟೆಯ ದೃಷ್ಟಿಯಲ್ಲಿ ನೋಡಿಯೇ ಅಭ್ಯಾಸ' ಎಂದು ಸಚಿವ ಈಶ್ವರಪ್ಪ ವಿರುದ್ಧ ಕಮಿಷನ್ ಕಿರುಕುಳ ಆರೋಪ ಮಾಡದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಂತೋಷ್ ಪಾಟೀಲ್ ಅವರ ಪತ್ನಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದೆ. 

 'ಬೊಮ್ಮಾಯಿ ಅವರೇ, ಇವರು ಹಿಂದೂ ಹೆಣ್ಣುಮಗಳು ಎನ್ನುವ ದೃಷ್ಟಿಯಲ್ಲಾದರೂ ನ್ಯಾಯ ಕೊಡಿಸಿ, ನ್ಯಾಯ ಅನ್ಯಾಯಗಳೆಲ್ಲವೂ ಧರ್ಮಾಧಾರಿತವಲ್ಲವೇ ನಿಮಗೆ' ಎಂದು ಆಕ್ರೋಶ ವ್ಯಕ್ತಪಡಿಸಿದೆ.

'ಕ್ರಿಕೆಟಿಗರ ಕೈಬೆರಳಿಗೆ ಗಾಯವಾದ ಬಗ್ಗೆ, ನಟಿಯರ ಕಿಚನ್ ಗಾರ್ಡನ್ ಬಗ್ಗೆ ವಿಚಾರಿಸಿ ಕಾಳಜಿ ತೋರುವ ಮೋದಿಯವರಿಗೆ ಗುತ್ತಿಗೆದಾರರ ಪತ್ರ, ಸಂತೋಷ್ ಪಾಟೀಲರ ಪತ್ರವನ್ನು ನೋಡುವಷ್ಟು ಸಮಯವಿರಲಿಲ್ಲವೇ? ಪತ್ರ ಬರೆದಾಗ ಪ್ರಧಾನಿ ಕ್ರಮ ಕೈಗೊಳ್ಳುವ ಪ್ರಾಮಾಣಿಕತೆ ತೋರಿಸದಿದ್ದಿದ್ದು ಏಕೆ? ಕರ್ನಾಟಕದ 40% ನಲ್ಲಿ ಪಾಲು ಪಡೆಯುತ್ತಿದ್ದಾರಾ?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News