ಬೆಂಗಳೂರು | ಹ್ಯಾಶಿಶ್ ಆಯಿಲ್ ಸಾಗಣೆ: ಆರೋಪಿಗಳ ಬಂಧನ
Update: 2022-04-14 18:13 IST
ಬೆಂಗಳೂರು, ಎ.14: ಲಖನೌದಿಂದ ಬೆಂಗಳೂರಿಗೆ ರೈಲಿನಲ್ಲಿ ಹ್ಯಾಶಿಸ್ ಆಯಿಲ್ ಸಾಗಿಸುತ್ತಿದ್ದ ಇಬ್ಬರು ಉತ್ತರ ಪ್ರದೇಶ ಮೂಲದ ಆರೋಪಿಗಳನ್ನು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ, 3.167 ಕೆ.ಜಿ. ಹ್ಯಾಶಿಶ್ ಆಯಿಲ್ ಅನ್ನು ಎನ್‍ಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬಂಧಿತರು ನೇಪಾಳ ಮೂಲದ ವ್ಯಕ್ತಿಯಿಂದ ಹ್ಯಾಶಿಶ್ ಆಯಿಲ್ ಖರೀದಿಸಿ ಬಳಿಕ ಬ್ಯಾಗಿನಲ್ಲಿ ಬಟ್ಟೆಗಳ ನಡುವೆ ಅಡಗಿಸಿಟ್ಟು ಬೆಂಗಳೂರಿಗೆ ಸಾಗಿಸುತ್ತಿದ್ದರು. ಬಂಧಿತರಿಂದ 3.167 ಕೆ.ಜಿ ಹ್ಯಾಶಿಶ್ ಆಯಿಲ್ ಅನ್ನು ಜಪ್ತಿ ಮಾಡಲಾಗಿದ್ದು, ಅವರು ನೀಡಿದ ಮಾಹಿತಿಯನ್ವಯ ಹ್ಯಾಶಿಶ್ ಆಯಿಲ್ ರಿಸೀವ್ ಮಾಡಿಕೊಳ್ಳಲು ಕಾಯುತ್ತಿದ್ದ ಬೆಂಗಳೂರು ಮೂಲದ ಮತ್ತೋರ್ವ ಆರೋಪಿಯನ್ನು ಸಹ ಬಂಧಿಸಲಾಗಿದೆ.