ಕಲಬುರಗಿ | ವ್ಯಕ್ತಿಯ ಹತ್ಯೆ ಪ್ರಕರಣ: ಇಬ್ಬರಿಗೆ ಕೋರ್ಟ್‍ನಿಂದ ಜೈಲು ಶಿಕ್ಷೆ

Update: 2022-04-14 14:28 GMT
ಸಾಂದರ್ಭಿಕ ಚಿತ್ರ

ಕಲಬುರಗಿ, ಎ.14: ವ್ಯಕ್ತಿಯ ಮರ್ಮಾಂಗಕ್ಕೆ ಹೊಡೆದು ಕೊಲೆಗೈದ ಆರೋಪ ಸಾಬೀತಾದ್ದರಿಂದ ಇಬ್ಬರಿಗೆ ಕಲಬುರಗಿ 3ನೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

ಬಾಬು ಶೇಖು ರಾಠೋಡ್, ಸಾಗರ ಸುಭಾಷ ಚವ್ಹಾಣ ಶಿಕ್ಷೆಗೆ ಗುರಿಯಾದವರು. ಅಳಂದ ತಾಲೂಕಿನ ನರೋಣಾ ಪೆÇಲೀಸ್ ಠಾಣೆಯ ವ್ಯಾಪ್ತಿಯ ಬೆಳಮಗಿ ತಾಂಡಾದಲ್ಲಿ 2020ರ ಮೇ 23 ರಂದು ಬಾಬು ಶಂಕರ ರಾಠೋಡ ಎಂಬುವವರ ಮೇಲೆ ಬಾಬು ಶೇಖು ರಾಠೋಡ್, ಸಾಗರ ಸುಭಾಷ ಚವ್ಹಾಣ ಮತ್ತಿತರರು ದಾಳಿ ನಡೆಸಿದ್ದರು.

ನ್ಯಾಯಪೀಠವು ಬಾಬು ಶೇಖು ರಾಠೋಡ್‍ಗೆ 6 ತಿಂಗಳು ಸಾದಾಶಿಕ್ಷೆ ಹಾಗೂ 1 ಸಾವಿರ ರೂ.ದಂಡ ಮತ್ತು ಸಾಗರ ಸುಭಾಷ ಚವ್ಹಾಣಗೆ 5 ವರ್ಷ ಸಾದಾಶಿಕ್ಷೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಫಿರ್ಯಾದಿಗೆ 10 ಸಾವಿರ ರೂ. ಗಾಯಾಳುವಿಗೆ 1 ಸಾವಿರ ರೂ. ಪರಿಹಾರ ನೀಡಲು ಆದೇಶಿಸಿದ್ದಾರೆ. ಸರಕಾರದ ಪರವಾಗಿ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News