×
Ad

ಈಶ್ವರಪ್ಪ ಅವರ ರಾಜೀನಾಮೆ ಈ ಭ್ರಷ್ಟ ಸರ್ಕಾರದ ಮೊದಲ ಸೋಲು: ಪ್ರಿಯಾಂಕ್ ಖರ್ಗೆ

Update: 2022-04-15 10:51 IST
ಪ್ರಿಯಾಂಕ್ ಖರ್ಗೆ | ಕೆ.ಎಸ್.ಈಶ್ವರಪ್ಪ

ಬೆಂಗಳೂರು:  ಕೆ.ಎಸ್.ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದರೂ, ವಿಧಾನಸೌಧದ ಎದುರು ಅಹೋರಾತ್ರಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ನಾಯಕರು 'ಈಶ್ವರಪ್ಪರನ್ನು ಬಂಧಿಸುವವರೆಗೂ ನಮ್ಮ ಹೋರಾಟ ನಿಲ್ಲದು' ಎಂದು ಪ್ರಕಟಿಸಿದ್ದಾರೆ. 

ಇನ್ನು ಈಶ್ವರಪ್ಪ ಅವರ ರಾಜೀನಾಮೆ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, 'ಸಂತೋಷ್ ಪಾಟೀಲ್ ಸಾವಿಗೆ ನ್ಯಾಯ ದೊರಕುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ' ಎಂದು ತಿಳಿಸಿದ್ದಾರೆ. 

''ಸತ್ಯದ ಮುಂದೆ ಗರ್ವ ತಲೆ ಬಾಗಲೇ ಬೇಕು, ನ್ಯಾಯದ ಮುಂದೆ ಭ್ರಷ್ಟತೆ ಸೋಲಲೇ ಬೇಕು, ಕೆ.ಎಸ್ ಈಶ್ವರಪ್ಪ ರಾಜೀನಾಮೆ ಈ ಭ್ರಷ್ಟ ಸರ್ಕಾರದ ಮೊದಲ ಸೋಲು, ನಾ ಖಾವೂಂಗಾ, ನಾ ಖಾನೇದೂಂಗಾ ಎಂದ ಪ್ರಧಾನಿಗಳ ಸುಳ್ಳಿಗೆ ಮತ್ತೊಂದು ಸಾಕ್ಷಿ, ಸಂತೋಷ್ ಪಾಟೀಲ್ ಸಾವಿಗೆ ನ್ಯಾಯ ದೊರಕುವ ವರೆಗೆ ನಮ್ಮ ಹೋರಾಟ ನಿರಂತರ'' ಎಂದು ಪ್ರಿಯಾಂಕ್ ಟ್ವೀಟ್ ಮಾಡಿದ್ದಾರೆ. 

'ಶುಕ್ರವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ' ಎಂದು ಗುರುವಾರ ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಅವರು ಘೋಷಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News