ರಾಜೀನಾಮೆಗೂ ಮುನ್ನ 29 ಪಿಡಿಒಗಳನ್ನು ವರ್ಗಾವಣೆ ಮಾಡಿದ್ದ ಈಶ್ವರಪ್ಪಗೆ ಎಷ್ಟು ಪರ್ಸೆಂಟ್: ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು: 'ರಾಜೀನಾಮೆ ಘೋಷಣೆ ಮಾಡಿ ಅಧಿಕೃತವಾಗಿ ನೀಡಲು ಸಾಕಷ್ಟು ಸಮಯ ತೆಗೆದುಕೊಂಡ ಈಶ್ವರಪ್ಪ ತುರಾತುರಿಯಲ್ಲಿ 29 ಪಿಡಿಓಗಳನ್ನ ವರ್ಗಾವಣೆ ಮಾಡಿದ್ದಾರೆ. ಈ ತುರಾತುರಿಯ ವರ್ಗಾವಣೆಯಲ್ಲಿ ಎಷ್ಟು ಪರ್ಸೆಂಟ್ ಹಗರಣವಿದೆ? ಇನ್ನುಳಿದ ಗುತ್ತಿಗೆದಾರರಿಂದ ಬಾಕಿಯಿದ್ದ 40% ವಸೂಲಿಗಾಗಿಯೇ ಇಷ್ಟು ಸಮಯ ತಗೆದುಕೊಂಡಿದ್ದಾ' ಎಂದು ಕೆ.ಎಸ್ ಈಶ್ವರಪ್ಪಗೆ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಸಂತೋಷ್ ಮಾಡಿದ ಕಾಮಗಾರಿಗೆ ಕಾರ್ಯಾದೇಶವೇ ಇರಲಿಲ್ಲ, ಸರ್ಕಾರಕ್ಕೂ ಕಾಮಗಾರಿಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದರು ಬಿಜೆಪಿಗರು, ಆದರೆ ಈಗ ಮುರುಗೇಶ್ ನಿರಾಣಿ ಸಂಪೂರ್ಣ ಮೊತ್ತವನ್ನು ಬಿಡುಗಡೆ ಮಾಡಿಸುತ್ತೇವೆ ಎನ್ನುವ ಮೂಲಕ ತಪ್ಪನ್ನು ಒಪ್ಪಿಕೊಳ್ಳತೊಡಗಿದ್ದಾರೆ. ಅಂದರೆ ಇಷ್ಟು ದಿನ ಈಶ್ವರಪ್ಪ ತಡೆಹಿಡಿದಿದ್ದರು ಎಂದಾಯಿತು' ಎಂದು ಹೇಳಿದೆ.
ರಾಜೀನಾಮೆ ಘೋಷಣೆ ಮಾಡಿ ಅಧಿಕೃತವಾಗಿ ನೀಡಲು ಸಾಕಷ್ಟು ಸಮಯ ತೆಗೆದುಕೊಂಡ ಈಶ್ವರಪ್ಪ ತುರಾತುರಿಯಲ್ಲಿ 29 ಪಿಡಿಓಗಳನ್ನ ವರ್ಗಾವಣೆ ಮಾಡಿದ್ದಾರೆ.
— Karnataka Congress (@INCKarnataka) April 15, 2022
ಈ ತುರಾತುರಿಯ ವರ್ಗಾವಣೆಯಲ್ಲಿ ಎಷ್ಟು ಪರ್ಸೆಂಟ್ ಹಗರಣವಿದೆ?
ಇನ್ನುಳಿದ ಗುತ್ತಿಗೆದಾರರಿಂದ ಬಾಕಿಯಿದ್ದ 40% ವಸೂಲಿಗಾಗಿಯೇ ಇಷ್ಟು ಸಮಯ ತಗೆದುಕೊಂಡಿದ್ದಾ @ikseshwarappa?#ArrestEshwarappa