×
Ad

ಸಂತೋಷ್ ಆತ್ಮಹತ್ಯೆ ಪ್ರಕರಣ ಜನಪ್ರತಿನಿಧಿಗಳ ಕೋರ್ಟ್ ಗೆ ವರ್ಗ

Update: 2022-04-15 21:04 IST

ಬೆಂಗಳೂರು, ಎ.15: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‍ಗೆ ವರ್ಗಾವಣೆ ಮಾಡಲಾಗಿದೆ.

ಪ್ರಕರಣದಲ್ಲಿ ಬಿಜೆಪಿ ಮುಖಂಡ, ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಅವರೇ ಮೊದಲ ಆರೋಪಿ ಆಗಿರುವುದರಿಂದ, ದೂರು ದಾಖಲಿಸಿಕೊಂಡಿರುವ ಉಡುಪಿ ಪೊಲೀಸರು, ನಿಯಮದಂತೆ ಪ್ರಕರಣ ರಾಜ್ಯ ಜನಪ್ರತಿನಿಧಿಗಳ ಕೋರ್ಟ್‍ಗೆ ವರ್ಗಾವಣೆ ಮಾಡಿದ್ದಾರೆ. 

ಇದಕ್ಕೂ ಮೊದಲು ಎಫ್‍ಐಆರ್‍ಗೆ ಪೂರಕವಾಗಿರುವ ದಾಖಲೆಗಳನ್ನು, ಸಿಸಿಟಿವಿ ಫುಟೇಜ್, ಹೊಟೇಲ್ ಸಿಬ್ಬಂದಿ ಮತ್ತು ಸಂತೋಷ್ ಪಾಟೀಲ್ ಗೆಳೆಯರ ಹೇಳಿಕೆಗಳನ್ನು ಉಡುಪಿ ನಗರ ಠಾಣೆ ಪೊಲೀಸರು ಸಂಗ್ರಹಿಸಿದ್ದರು, ಅವುಗಳೆಲ್ಲವನ್ನೂ ಎಫ್‍ಐಆರ್‍ನೊಂದಿಗೆ ಜನಪ್ರತಿನಿಧಿ ಕೋರ್ಟ್‍ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News