ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎ.17ರಂದು ರಾಜೀನಾಮೆ: ಎಚ್.ಕೆ.ಕುಮಾರಸ್ವಾಮಿ
Update: 2022-04-15 22:01 IST
ಹಾಸನ: ‘ಪಕ್ಷದ ಸಂಘಟನೆ ದೃಷ್ಟಿಯಿಂದ ಅಧಿಕಾರ ಸ್ಥಾನಗಳು ಬದಲಾಗುತ್ತಿದ್ದು, ಏ.17ರಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ’ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಈಗಾಗಲೇ ಪಕ್ಷದ ದೇವೇಗೌಡರು, ಕುಮಾರಣ್ಣ, ನನ್ನೊಂದಿಗೆ ಚರ್ಚಿಸಿದ್ದಾರೆ. ನಾನೂ ಕೂಡ ಹುದ್ದೆ ಬಿಟ್ಟುಕೊಡಲು ಒಪ್ಪಿದ್ದೇನೆ. ಪಕ್ಷದ ಸಂಘಟನೆ, ಅಭಿವೃದ್ಧಿಗೆ ಸಹಾಯಕ ಆಗುವುದಾದರೆ ನಾವು ಎಲ್ಲಾ ತ್ಯಾಗಕ್ಕೂ ಸಿದ್ದ ಎಂದು ನುಡಿದರು.
'ನಾನು ಶಾಸಕನಾಗಿರುವುದರಿಂದ, ವಿಧಾನಸಭೆ ಚುನಾವಣೆಯೂ ಹತ್ತಿರ ಬರುತ್ತಿರುವುದರಿಂದ ನನ್ನ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಜೊತೆಗೆ ಇಬ್ರಾಹಿಂ ಜೆಡಿಎಸ್‌ಗೆ ಬರುತ್ತಿರುವುದು ಸಂತೋಷ. ಪಕ್ಷ ಸಂಘಟನೆ ವಿಷಯದಲ್ಲಿ ಅವರೊಂದಿಗೆ ನಾವೂ ಇರುತ್ತೇವೆ' ಎಂದು ಹೇಳಿದರು.