ಕೊಳ್ಳೇಗಾಲ ಶಾಸಕ ಮಹೇಶ್ ಸೂಚನೆಯ ಮೇರೆಗೆ ಪೊಲೀಸರಿಂದ ವ್ಯಕ್ತಿಗೆ ಹಲ್ಲೆ: ಆರೋಪ

Update: 2022-04-17 11:18 GMT
ಶಾಸಕ‌ ಎನ್. ಮಹೇಶ್ ವಿರುದ್ಧ ಪ್ರತಿಭಟನೆ

ಕೊಳ್ಳೇಗಾಲ. ಎ.15. ಅಂಬೇಡ್ಕರ್ ಜಯಂತಿಯಂದು ಶಾಸಕ‌ ಎನ್. ಮಹೇಶ್ ಜೊತೆ ಸಿದ್ದರಾಜು ಆಕ್ರೋಶಗೊಂಡು ಮಾತನಾಡಿದ್ದರಂತೆ. ಇದಕ್ಕೆ ಕೋಪಗೊಂಡ ಶಾಸಕರು ಮಾಂಬಳ್ಳಿ ಪೊಲೀಸರಿಗೆ ಸೂಚಿಸಿ ಹಲ್ಲೆ ಮಾಡಿಸಿದ್ದಾರೆ ಎಂದು ದಲಿತ ಸಂಘಟನೆಯ (ಡಿಎಸ್ಎಸ್) ಮುಖಂಡರು ಆರೋಪ ಮಾಡಿದ್ದಾರೆ.

ಕೊಳ್ಳೇಗಾಲದಲ್ಲಿ ಸುಖಾಸುಮ್ಮನೆ ವ್ಯಕ್ತಿಯೊಬ್ಬನಿಗೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಇವರ ಥಳಿತಕ್ಕೆ ಶಾಸಕ ಎನ್.ಮಹೇಶ್​ ಅವರೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಈ ಘಟನೆ ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಜರುಗಿದೆ.

ಉತ್ತಂಬಳ್ಳಿ ಗ್ರಾಮದ ಸಿದ್ದರಾಜು(40) ಪೊಲೀಸರ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ.‌ ಅಂಬೇಡ್ಕರ್ ಜಯಂತಿಯಂದು ಶಾಸಕ‌ ಎನ್. ಮಹೇಶ್ ಜೊತೆ ಸಿದ್ದರಾಜು ಆಕ್ರೋಶಗೊಂಡು ಮಾತನಾಡಿದ್ದರಂತೆ. ಇದಕ್ಕೆ ಕೋಪಗೊಂಡ ಶಾಸಕರು ಮಾಂಬಳ್ಳಿ ಪೊಲೀಸರಿಗೆ ಸೂಚಿಸಿ ಹಲ್ಲೆ ಮಾಡಿಸಿದ್ದಾರೆ ಎಂದು ಡಿಎಸ್ಎಸ್ ಮುಖಂಡ ಉತ್ತಂಬಳ್ಳಿ ಗ್ರಾಮದ ಲಿಂಗಣ್ಣ ಆರೋಪಿಸಿದ್ದಾರೆ. ಗಾಯಾಳು ಸಿದ್ದರಾಜು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಥಳಿಸಿರುವ ಆರೋಪವನ್ನು ಮಾಂಬಳ್ಳಿ ಪೊಲೀಸರು ತಳ್ಳಿಹಾಕಿದ್ದಾರೆ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News