ಸಾಲು ಸಾಲು ಸರ್ಕಾರಿ ರಜೆ ಹಿನ್ನಲೆ: ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

Update: 2022-04-15 18:55 GMT

ಮೈಸೂರು,ಎ.15: ಸಾಲು ಸಾಲು ಸರ್ಕಾರಿ ರಜೆಗಳು ಬಂದಿರುವುದರಿಂದ ಮೈಸೂರು ನಗರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು ನಗರದ ತುಂಬಾ ಜನಸಾಗರವೇ ಕಾಣಿಸುತ್ತಿದೆ.

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಗುಡ್ ಫ್ರೈಡೇ, ವೀಕೆಂಡ್ ಹಾಲಿಡೆಗಳು ಸೇರಿ ಸಾಲು ಸಾಲು ಸರ್ಕಾರಿ ರಜೆಗಳು ಇರುವುದರಿಂದ ಪ್ರವಾಸಿಗರು ತಂಡೋಪ ತಂಡವಾಗಿ ಮೈಸೂರಿಗೆ ಆಗಮಿಸಿ ಪ್ರೇಕ್ಷಣೀಯ ಸ್ಥಳನ್ನು ವೀಕ್ಷಿಸುತ್ತಿದ್ದಾರೆ.

ಮೈಸೂರು ಅರಮನೆ, ಚಾಮುಂಡಿಬೆಟ್ಟ, ಮೃಗಾಲಯದಲ್ಲಿ ಜನಸಾಗರವೇ ಕಂಡು ಬಂದಿದೆ. ಎಪ್ರಿಲ್ 13 ರಿಮದ ಎಪ್ರಿಲ್ 16 ರವರೆಗೂ ಪ್ರವಾಸಿಗರು ಹೆಚ್ಚಿಗೆ ಬರಲಿದ್ದು ಗ್ರಾಹಕರಿಂದ ಈ ನಾಲ್ಕೂ ದಿನಗಳು ಮೈಸೂರು ನಗರದ ಮಧ್ಯಬಾಗದಲ್ಲಿರುವ ಹೋಟೆಲುಗಳಲ್ಲಿ ರೂಮುಗಳನ್ನು ಹೊಂದಿರುವ ಎಲ್ಲ ಹೋಟೆಲುಗಳು ಶೇ100% ರಷ್ಟು ಭರ್ತಿಯಾಗಿವೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.

ನಗರ ಹೊರವಲಯದ ರಿಂಗ್ ರಸ್ತೆಯ ಆಜು ಬಾಜುಳಲ್ಲಿರುವ ಮತ್ತು ವಿವಿಧ ಬಡಾವಣೆಗಳಲ್ಲಿರುವ ಹೋಟೆಲುಗಳಲ್ಲಿ ಶೇ 90ರಷ್ಟು ರೂಮುಗಳು ಗ್ರಾಹಕರಿಂದ ಭರ್ತಿಯಾಗಿವೆ. ಮೈಸೂರು ನಗರದಾದ್ಯಂತ 10 ಸಾವಿರಕ್ಕಿಂತ ಹೆಚ್ಚು ರೂಮುಗಳು ಇವೆ. ಕಳೆದ 2 ವರ್ಷಗಳಿಗೆ ಹೋಲಿಸಿದರೆ ಈ ನಾಲ್ಕೈದು ದಿನವೂ ತುಂಬಾ ಚೆನ್ನಾಗಿ ವ್ಯಾಪಾರ ವಹಿವಾಟು ನಡೆದಿದೆ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News