×
Ad

ಹುಕ್ಕಾ ಸೇವನೆಗೆ ಪ್ರತ್ಯೇಕ ವ್ಯವಸ್ಥೆ ಇರಬೇಕು: ಹೈಕೋರ್ಟ್

Update: 2022-04-17 00:13 IST

ಬೆಂಗಳೂರು: ತಂಬಾಕು ಸೇವನೆಗೆ ಹುಕ್ಕಾ ಬಳಸಬಹುದಾಗಿದ್ದರೂ ಅದರ ಸೇವನೆಗೆ ಪ್ರತ್ಯೇಕ ವ್ಯವಸ್ಥೆ ಇರಬೇಕು. ಈ ಸಂಬಂಧ ತೊಂದರೆ ಇಲ್ಲದೆ, ಪ್ರಾಧಿಕಾರದಿಂದ ಅನುಮತಿ ಪಡೆದು ನಿರ್ದಿಷ್ಟ ಜಾಗದಲ್ಲಿ ಸ್ಮೋಕಿಂಗ್‍ಝೋನ್ ನಿರ್ಮಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಇಲ್ಲಿನ ಬಸವನಗುಡಿಯಲ್ಲಿರುವ ಸೋಹೋ ಪಬ್ ಅಂಡ್ ಗ್ರಿಲ್ ಹೆಸರಿನ ರೆಸ್ಟೋರೆಂಟ್ ಮಾಲಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿರುವುದರಿಂದ ರೆಸ್ಟೋರೆಂಟ್ ಮಾಲಕರು ಬಿಬಿಎಂಪಿಯಿಂದ ಅಗತ್ಯ ಅನುಮತಿ ಪಡೆದು ಆನಂತರ ಹೊಗೆರಹಿತ ಹುಕ್ಕಾ ಸೇವನೆಗೆ ನಿರ್ದಿಷ್ಟ ಸ್ಮೋಕಿಂಗ್‍ಝೋನ್ ರಚಿಸಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿರುವುದರಿಂದ ಹುಕ್ಕಾ ಸೇವನೆ ಇತರೆ ಗ್ರಾಹಕರಿಗೆ ತೊಂದರೆ ಉಂಟು ಮಾಡಬಾರದು. ಹುಕ್ಕಾ ಸೇವನೆಗೆ ರೆಸ್ಟೋರೆಂಟ್‍ನಲ್ಲಿಯೇ ಪ್ರತ್ಯೇಕ ಜಾಗ ಮೀಸಲಿಡಬೇಕಾಗುತ್ತದೆ. ಪಬ್ ಮಾಲಕರಿಗೆ ತಪಾಸಣೆ ಹೆಸರಿನಲ್ಲಿ ಪೊಲೀಸರು ಅನಗತ್ಯ ಕಿರುಕುಳ ನೀಡಬಾರದು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News