ಗುತ್ತಿಗೆದಾರ ಸಂತೋಷ್ ಕುಟುಂಬಕ್ಕೆ ಪರಿಹಾರ ಕೊಡಿ: ಸಿ.ಎಂ.ಇಬ್ರಾಹೀಂ ಆಗ್ರಹ

Update: 2022-04-17 17:07 GMT

ಬೆಂಗಳೂರು, ಎ. 17: ‘ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಹಾಗೂ ಸಂಘ ಪರಿವಾರದ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರ ಕುಟುಂಬಕ್ಕೆ ರಾಜ್ಯ ಸರಕಾರ ಕೂಡಲೇ ಪರಿಹಾರ ನೀಡಬೇಕು' ಎಂದು ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ಆಗ್ರಹಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕೆ.ಎಸ್.ಈಶ್ವರಪ್ಪ ಮತ್ತವರ ಬಂಧು-ಬಳಗದವರು ಏನು ಆಸ್ತಿ ಮಾಡಿದ್ದಾರೋ ಅದನ್ನೆಲ್ಲಾ ಲೆಕ್ಕ ಹಾಕಬೇಕು. ಜೊತೆಗೆ ಅದನ್ನು ಮುಟ್ಟುಗೋಲು ಹಾಕಿದರೆ ಬೇರೆ ಸಚಿವರು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲಿದ್ದಾರೆ' ಎಂದು ಎಚ್ಚರಿಕೆ ನೀಡಿದರು.

‘ಬಜರಂಗದಳದ ಕಾರ್ಯಕರ್ತ ಕೊಲೆಯಾದರೆ ಆತನಿಗೆ 25 ಲಕ್ಷ ರೂ.ಪರಿಹಾರ ನೀಡಿದ್ದಾರೆ. ಆದರೆ, ಸಚಿವರ ಕಿರುಕುಳದಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಕುಟುಂಬಕ್ಕೆ ಏನೂ ಇಲ್ವೇ?' ಎಂದ ಅವರು, ರಾಜ್ಯದಲ್ಲಿ ಕೋಮು ಸಂಘರ್ಷ ಸೃಷ್ಟಿಸಲಾಗುತ್ತಿದೆ. ಏನೇ ವಿಚಾರಗಳಿದ್ದರೂ ಸಮುದಾಯದ ಮುಖಂಡರ ಗಮನಕ್ಕೆ ತರಬೇಕು. ಅದು ಬಿಟ್ಟು ಬೀದಿಗೆ ಇಳಿಯುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News