×
Ad

ಐಎಎಸ್ ಅಧಿಕಾರಿಗಳ ವರ್ಗಾವಣೆ: ರಾಜ್ಯ ಸರಕಾರದ ಆದೇಶ

Update: 2022-04-18 22:11 IST

ಬೆಂಗಳೂರು, ಎ.18:  ರಾಜ್ಯ ಸರಕಾರ ಆಡಳಿತಕ್ಕೆ ಭರ್ಜರಿ ಸರ್ಜರಿ ಮಾಡಿದೆ. 17 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಜಿ.ಕಲ್ಪನಾರನ್ನು ಕಾರ್ಮಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಶ್ರೀವತ್ಸ ಕೃಷ್ಣರನ್ನು ಡಿಪಿಎಆರ್ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.

ಅಮ್ಲನ್ ಆದಿತ್ಯ ಬಿಸ್ವಾಸ್‍ರನ್ನು ಐಎಂಎ ವಿಶೇಷ ಅಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ. ಮುನೀಶ್ ಮೌದ್ಗಿಲ್‍ರನ್ನು ಭೂ ಮಾಪನ ಹಾಗೂ ಭೂ ದಾಖಲೆ ಇಲಾಖೆ ಆಯುಕ್ತರಾಗಿ ವರ್ಗಾಯಿಸಲಾಗಿದೆ. 

ಶಿವಯೋಗಿ ಕಳಸದ್‍ರನ್ನು ಕೃಷಿ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಅನ್ಬು ಕುಮಾರ್ ಅವರನ್ನು ಕೆಎಸ್ಸಾರ್ಟಿಸಿ ಎಂಡಿಯಾಗಿ ವರ್ಗಾಯಿಸಲಾಗಿದೆ. ಎನ್.ವಿ.ಪ್ರಸಾದ್‍ರನ್ನು ಸಾರಿಗೆ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಜಿ. ಸತ್ಯವತಿಯನ್ನು ಬಿಎಂಟಿಸಿ ಎಂಡಿಯಾಗಿ ವರ್ಗಾಯಿಸಲಾಗಿದೆ. ಜೊತೆಗೆ ಕೆಪಿಎಸ್‍ಸಿ ಕಾರ್ಯದರ್ಶಿಯಾಗಿಯೂ ಮುಂದುವರಿಯಲಿದ್ದಾರೆ. ರೇಜು ಎಂ.ಟಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ದೀಪಾ.ಎಂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆಯ ಎಂಡಿಯಾಗಿ ವರ್ಗಾಯಿಸಲಾಗಿದೆ. ಪಲ್ಲವಿ ಅಕುರಾತಿ ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕರಾಗಿ ವರ್ಗಾವಣೆಯಾಗಿದ್ದಾರೆ.

ವೆಂಕಟೇಶ ಕುಮಾರ್‍ಗೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯಕ್ತರಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ. ರಾಕೇಶ್ ಕುಮಾರ್‍ರನ್ನು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾಗಿ ವರ್ಗಾಯಿಸಲಾಗಿದೆ. ರವೀಂದ್ರ ಪಿ.ಎನ್.ರನ್ನು ಬಿಬಿಎಂಪಿ ವಿಶೇಷ ಆಯುಕ್ತ (ಯೋಜನೆ) ವರ್ಗಾವಣೆ ಮಾಡಲಾಗಿದೆ. ಅವಿನಾಶ್ ಮೆನಮ್ ರಾಜೇಂದ್ರನ್ ರನ್ನು ರಾಮನಗರ ಜಿಲ್ಲೆಯ ಡಿಸಿಯಾಗಿ ವರ್ಗಾಯಿಸಲಾಗಿದೆ. ಚಂದ್ರಶೇಖರ ನಾಯಕರನ್ನು ರಾಯಚೂರು ಜಿಲ್ಲೆಯ ಡಿಸಿಯಾಗಿ ವರ್ಗಾವಣೆ ಮಾಡಲಾಗಿದೆ. ವಿಜಯ ಮಹಂತೇಶ್ ಬಿ.ಡಿ ವಿಜಯಪುರ ಡಿಸಿಯಾಗಿ ವರ್ಗಾವಣೆಯಾಗಿದ್ದಾರೆ.


     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News