×
Ad

ಬೇಲೂರು: ಜನತಾ ಜಲಧಾರೆಗೆ ಚಾಲನೆ ನೀಡಿದ ಶಾಸಕ ಲಿಂಗೇಶ್

Update: 2022-04-18 22:29 IST

ಬೇಲೂರು:  ನಗರದ ಯಗಚಿ ಜಲಾಶಯ ದಿಂದ ಬೇಲೂರು ತಾಲೂಕಿನಾದ್ಯಂತ ಜೆಡಿಎಸ್ ನಿಂದ ಏರ್ಪಡಿಸಿದ್ದ ಜನತಾ ಜಲಧಾರೆ  ಕಾರ್ಯಕ್ರಮಕ್ಕೆ ಶಾಸಕ ಲಿಂಗೇಶ್ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ನಾವು ರಾಜ್ಯ ಧ್ಯಂತ ಈ ಜನತಾ ಜಲಧಾರೆ ಅನುಷ್ಠಾನ ಗೊಳ್ಳಿಸುತ್ತೇವೆ ಮತ್ತು ಕುಮಾರ ಸ್ವಾಮಿ ಸರ್ಕಾರ 56ಸಾವಿರ ಕೋಟಿ ಸಾಲ ಮನ್ನಾ ಮಾಡಿತು ಅದೇ ರೀತಿ  ಬೇಲೂರು ತಾಲೂಕಿನಲ್ಲಿ ಎರೆಡು  ರಣ ಘಟ್ಟ ಏತ ನೀರಾವರಿ. ಎತ್ತಿನಹೊಳೆ ಏತ ನೀರಾವರಿ 0.12ಟಿ ಎಂ ಸಿ ನೀರು ಬೇಲೂರು ತಾಲೂಕಿನ ಅಡಗುರು.ಗಂಗೂರು.ಸಾಣೆನಹಳ್ಳಿ .ದೊಡ್ಡ ಕೊಡಿ ಹಳ್ಳಿ ಡಿ ಪಿ ಆರ್ ನಮ್ಮ ಹೋರಾಟದ ಮೂಲಕ ನೀರು ಬಿಡುವ ವ್ಯವಸ್ಥೆ ಮಾಡಲಾಗಿದೆ .ಸಣ್ಣ ನೀರಾವರಿ ಇಲಾಖೆ ಇಂದ ಹೆಬ್ಬಾಳು ಏತ ನೀರಾವರಿ ಮೂಲಕ ಹೇಮಾವತಿ ಜಲಾಶಯ ದಿಂದ ಹನಿಕೆ ಹೆಬ್ಬಾಳು ನಾರಾಯಣ ಪುರ ರಾಜನ ಸಿರಿಯೂರು ಕೆರೆಗೆ ನೀರು ತುಂಬಿಸುವ ಕೆಲಸ ಮಾಡುತ್ತೇವೆ ಜನ ಮುಂದಿನ 5ವರ್ಷ ದವರೆಗೆ ಅಧಿಕಾರ ನೀಡಿದರೆ ಕೆಲಸ ಸಾಧ್ಯ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಜನತಾದಳದ ಮಾಜಿ ಪುರಸಭೆ ಸದಸ್ಯರದ ಭಾರತಿ ಅರುಣ್ ಕುಮಾರ್.ಡಿಬಿ ಚಂದ್ರೇಗೌಡ .ಕಾರ್ಯಕರ್ತರು ಉಪಸ್ಥಿತರಿದ್ದರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News