ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ರಮೇಶ್ ಬಾಬು ಆಯ್ಕೆ
ಬೆಂಗಳೂರು, ಎ.19: ಹಿರಿಯ ವಕೀಲರು, ವಿಧಾನ ಪರಿಷತ್ ಮಾಜಿ ಸದಸ್ಯರು, ಸಹಕಾರಿ ಧುರೀಣರೂ ಅದ ರಮೇಶ್ ಬಾಬು ಅವರು ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಬ್ಯಾಂಕ್‍ನ ಅಧ್ಯಕ್ಷರಾಗಿ ಬ್ಯಾಂಕ್ ಹಾಗೂ ಅದರ ಸದಸ್ಯರ ಏಳಿಗೆಗಾಗಿ ಶ್ರಮಿಸಿದ ರಮೇಶ್ ಬಾಬು, ಬ್ಯಾಂಕ್ ಅನ್ನು ಅತ್ಯಂತ ಲಾಭದಾಯಕ ಹಾಗೂ ವಿಶ್ವಾಸಾರ್ಹ ಸಂಸ್ಥೆಯನ್ನಾಗಿಸಿ ಅದನ್ನು ಪ್ರಗತಿ ಪಥದತ್ತ ಕೊಂಡೊಯ್ದರು.
ವಕೀಲ ಸಮುದಾಯವಷ್ಟೇ ಅಲ್ಲ ಬ್ಯಾಂಕ್ ಎಲ್ಲಾ ಸದಸ್ಯರ ಆಗು ಹೋಗುಗಳಿಗೆ ಸ್ಪಂದಿಸುವ ಮೂಲಕ ಬ್ಯಾಂಕ್ ನಿಜವಾದ ಅರ್ಥದಲ್ಲಿ ನ್ಯಾಯಮಿತ್ರನಾಗಿ ಕೆಲಸ ಮಾಡುವಂತೆ ಮಾಡಿದವರು ರಮೇಶ್ ಬಾಬು.ಮ ಇವರು ಮಾಡಿದ ವಿನೂತನ ಪ್ರಯೋಗಗಳಿಂದ ಈ ಬ್ಯಾಂಕ್ ಬೆಂಗಳೂರಿನಲ್ಲಿ ಅತ್ಯಂತ ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಇವರ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರ ಇತ್ತೀಚೆಗೆ ಇವರಿಗೆ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಇಂತಹ ಸಹಕಾರಿಯ ಸೇವೆಯನ್ನು ಗುರುತಿಸಿದ ನ್ಯಾಯಮಿತ್ರ ಸಹಕಾರಿ ಬ್ಯಾಂಕ್‍ನ ಸದಸ್ಯರು ಇವರನ್ನು ಮತ್ತೊಂದು ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ.
ಈ ಅವಧಿಯಲ್ಲಿ ಬ್ಯಾಂಕ್ 1,03,775.4 ಲಕ್ಷ ರೂಪಾಯಿ ವಹಿವಾಟು ನಡೆಸಿದ್ದು, 353.93 ಲಕ್ಷ ರೂಪಾಯಿ ಲಾಭ ಗಳಿಸಿದೆ ಎಂದು ಬ್ಯಾಂಕ್‍ನ ಪ್ರಧಾನ ವ್ಯವಸ್ಥಾಪಕ ಡಿ.ಆರ್.ಪ್ರಸನ್ನ ತಿಳಿಸಿದ್ದಾರೆ.