×
Ad

RTE ಶುಲ್ಕ ಮರುಪಾವತಿ ಮಾಡದ ಸರಕಾರ: ಖಾಸಗಿ ಶಾಲೆಗಳಲ್ಲಿ ಆರ್ ಟಿ ಇ ಪ್ರವೇಶ ನಿಲ್ಲಿಸಲು ಚಿಂತನೆ

Update: 2022-04-19 20:18 IST
ಸಾಂದರ್ಭಿಕ ಚಿಂತನೆ

ಬೆಂಗಳೂರು, ಎ.19: 2022-23ನೇ ಶೈಕ್ಷಣಿಕ ವರ್ಷದಿಂದ ಖಾಸಗಿ ಶಾಲೆಗಳಲ್ಲಿ ಆರ್‍ಟಿಇ ಮಕ್ಕಳ ಪ್ರವೇಶ ಪಡೆಯದಿರಲು ನಿರ್ಧಾರ ಮಾಡಲಾಗಿದೆ. ಆರ್‍ಟಿಇ ಪ್ರವೇಶ ಸ್ಥಗೊತಗೊಳಿಸದೆ, ಮುಂದುವರಿಸಬೇಕು ಎಂತಾದರೆ ಕೂಡಲೇ ಸರಕಾರ ಆರ್ ಟಿಇ ಹಣ ಬಿಡುಗಡೆ ಮಾಡುವಂತೆ ಖಾಸಗಿ ಶಾಲಾ ಒಕ್ಕೂಟ ಒತ್ತಾಯ ಮಾಡಿದೆ.

ವಾರ್ಷಿಕ ಮಾನ್ಯತೆ ನವೀಕರಣ ನೆಪವೊಡ್ಡಿ ಆರ್‍ಟಿಇ ಶುಲ್ಕ ಮರುಪಾವತಿಗೆ ತಡೆಯೊಡ್ಡಲಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಒಕ್ಕೂಟವು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‍ಗೆ ಪತ್ರ ಬರೆದಿದ್ದು, ಖಾಸಗಿ ಶಾಲೆಗಳಲ್ಲಿ ಆರ್‍ಟಿಇ ಪ್ರವೇಶ ನಿಲ್ಲಿಸಲು ಚಿಂತನೆ ನಡೆದಿದೆ ಎಂದು ಎಚ್ಚರಿಸಿದೆ. 

2022-23ನೇ ಶೈಕ್ಷಣಿಕ ವರ್ಷದಿಂದ ಖಾಸಗಿ ಶಾಲೆಗಳಲ್ಲಿ ಆರ್‍ಟಿಇ ಮಕ್ಕಳ ಪ್ರವೇಶ ಪಡೆಯದಿರಲು ನಿರ್ಧಾರ ಮಾಡಲಾಗಿದೆ. ಆರ್‍ಟಿಇ ಪ್ರವೇಶ ಸ್ಥಗೊತಗೊಳಿಸದೆ, ಮುಂದುವರೆಸಬೇಕು ಎಂತಾದರೆ ಕೂಡಲೇ ಆರ್‍ಟಿಇ ಹಣ ಬಿಡುಗಡೆ ಮಾಡುವಂತೆ ಖಾಸಗಿ ಶಾಲಾ ಒಕ್ಕೂಟ ಒತ್ತಾಯ ಮಾಡಿದೆ. ಇಲ್ಲವಾದ್ರೆ ರಾಜ್ಯದ 11 ಸಾವಿರ ಖಾಸಗಿ ಶಾಲೆಗಳಲ್ಲಿ ಆರ್‍ಟಿಇ ಸ್ಥಗಿತಗೊಳಿಸಲಾಗುವುದು ಎಂದು ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಪತ್ರದಲ್ಲಿ ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News