ಹುಬ್ಬಳ್ಳಿ ಗಲಭೆ: ಕಲಬುರಗಿ ಕೇಂದ್ರ ಕಾರಾಗೃಹಕ್ಕೆ103 ಬಂಧಿತ ಆರೋಪಿಗಳ ಸ್ಥಳಾಂತರ
Update: 2022-04-19 22:58 IST
ಕಲಬುರಗಿ: ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದ 103 ಜನ ಆರೋಪಿಗಳನ್ನು ಮುಂಜಾಗೃತಾ ಕ್ರಮವಾಗಿ ಕಲಬುರಗಿಗೆ ಕೇಂದ್ರ ಕಾರಗೃಹಕ್ಕೆ ಸ್ಥಳಾಂತರಿಸಲಾಗಿದೆ.
ಹುಬ್ಬಳ್ಳಿಯಿಂದ ನಾಲ್ಕು ಪೊಲೀಸ್ ವ್ಯಾನ್ ಳಲ್ಲಿ ಎಲ್ಲ ಆರೋಪಿಗಳನ್ನು ಕರೆತರಲಾಗಿದ್ದು, ಕಾರಾಗೃಹದ ಹತ್ತಿರ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಒಳ ಬಿಡಲಾಗಿದೆ. ಸದ್ಯ ಕೇಂದ್ರ ಕಾರಾಗೃಹ ಸುತ್ತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಹುಬ್ಬಳಿಯಲ್ಲಿ ದೇವಸ್ಥಾನ, ಮನೆ ಹಾಗೂ ಪೋಸ್ಟ್ ಆಫೀಸ್, ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಆರೋಪಿಗಳು ಇವರಾಗಿದ್ದಾರೆ.