×
Ad

ಪತ್ರಕರ್ತ ಸಿ.ಮಹೇಶ್ವರನ್ ಹೃದಯಾಘಾತದಿಂದ ನಿಧನ

Update: 2022-04-19 23:01 IST

ಮೈಸೂರು,ಎ.19: ಸಾದ್ವಿ ದಿನಪತ್ರಿಕೆಯ ಸಂಪಾದಕ ಸಿ.ಮಹೇಶ್ವರನ್ (64) ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕೆ.ಸಿ.ಲೇಔಟ್‍ನಲ್ಲಿರುವ ಅವರ ಸ್ವಗೃಹದಲ್ಲಿ ಮಂಗಳವಾರ ಸಂಜೆ ಹೃದಯಾಘಾತದಿಂದ ಅಸುನೀಗಿದ್ದಾರೆ. ಇತ್ತೀಚೆಗೆ ಅನಾರೋಗ್ಯಕ್ಕೀಡಾಗಿದ್ದರು ಎಂದು ತಿಳಿದು ಬಂದಿದೆ.

ಪತ್ರಕರ್ತ ಸಿ.ಮಹೇಶ್ವರನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತಾದರೂ ಅದನ್ನು ಸ್ವೀಕರಿಸುವ ಮುನ್ನವೆ ಅವರು ಅಸುನೀಗಿರುವುದು ಆತಂಕವನ್ನುಂಟು ಮಾಡಿದೆ.

ಮೃತರು ಕಳೆದ 35 ವರ್ಷಗಳಿಂದಲೂ ಸಾದ್ವಿ ಪತ್ರಕೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದರು. ಇವರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ.
ಮೃತರ ಅಂತ್ಯಕ್ರಿಯೆ ಬುಧವಾರ ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News