ಪಿಎಸ್ಸೈ ನೇಮಕಾತಿ ಅಕ್ರಮ: ದಿವ್ಯಾ ಹಾಗರಗಿಯಿಂದ ಗೃಹ ಸಚಿವರಿಗೆ ಬಂದ ಪಾಲೆಷ್ಟು?; ದಿನೇಶ್ ಗುಂಡೂರಾವ್

Update: 2022-04-20 11:50 GMT

ಬೆಂಗಳೂರು, ಎ. 20: ‘ಪಿಎಸ್ಸೈ ಅಕ್ರಮ ನೇಮಕಾತಿಯ ಕಿಂಗ್‍ಪಿನ್ ದಿವ್ಯಾ ಹಾಗರಗಿ ಬಿಜೆಪಿಯ ಸಕ್ರಿಯ ಕಾರ್ಯಕರ್ತೆ ಮತು ನಾಯಕಿ. ಪಿಎಸ್ಸೈ ನೇಮಕಾತಿ ಅಕ್ರಮದಲ್ಲಿ ಹಾಗರಗಿ ಜೊತೆ ಇಡೀ ಸರಕಾರವೇ ಶಾಮೀಲಾಗಿ ದಂಧೆ ನಡೆಸಿದೆ. ಈಗ ದಿವ್ಯಾ ಹಾಗರಗಿಗೂ ನಮಗೂ ಸಂಬಂಧವಿಲ್ಲ ಎಂದು ಬಿಜೆಪಿಯವರು ಹೇಳಿಕೊಂಡರೆ ಯಾರಾದರೂ ನಂಬಲು ಸಾಧ್ಯವೇ?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗಾಂಧಿ ನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ‘545 ಮಂದಿ ಪಿಎಸ್ಸೈ ನೇಮಕಾತಿಯ ಕಿಂಗ್‍ಪಿನ್ ದಿವ್ಯಾ ಹಾಗರಗಿಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಅರಚಿಕೊಳ್ಳುತ್ತಿರುವ ಬಿಜೆಪಿಯವರಿಗೆ ಕೆಲ ಪ್ರಶ್ನೆಗಳು. ದಿವ್ಯಾ ಹಾಗರಗಿ ಕುಟುಂಬಕ್ಕೂ ಗೃಹ ಸಚಿವ ಆರಗ ಜ್ಞಾನೇಂದ್ರರ ನಡುವೆ ಇರುವ ಲಿಂಕ್ ಏನು? ದಿವ್ಯಾ ಹಾಗರಗಿ ನಿವಾಸಕ್ಕೆ ಗೃಹ ಸಚಿವ ಯಾವ ಡೀಲ್ ಕುದುರಿಸಲು ಭೇಟಿ ಕೊಟ್ಟಿದ್ದರು? ಪಿಎಸ್ಸೈ ನೇಮಕಾತಿಯ 200 ಕೋಟಿ ರೂ.ಲಂಚದಲ್ಲಿ ದಿವ್ಯಾ ಹಾಗರಗಿಯಿಂದ ಗೃಹ ಸಚಿವರಿಗೆ ಬಂದ ಪಾಲೆಷ್ಟು?' ಎಂದು ಪ್ರಶ್ನಿಸಿದ್ದಾರೆ.

‘ಲಂಚದ ಹಣದಲ್ಲೂ ಈ ಸರಕಾರಕ್ಕೆ ಶೇ.40ರಷ್ಟು ಪಸೆರ್ಂಟ್ ಪಾಲು ಸಿಕ್ಕಿದೆಯೇ ಅಥವಾ ಡಿಸ್ಕೌಂಟ್ ಸಿಕ್ಕಿದೆಯೇ? ದಿವ್ಯಾ ಬಿಜೆಪಿಯವರಲ್ಲದಿದ್ದರೆ ಬಿಎಸ್‍ವೈ ಅವರು ಸಿಎಂ ಆಗಿದ್ದಾಗ ದಿವ್ಯಾರನ್ನು ನಸಿರ್ಂಗ್ ಕೌನ್ಸಿಲ್ ಸದಸ್ಯರಾನ್ನಾಗಿ ಮಾಡಿದ್ದು ಯಾವ ಮಾನದಂಡದ ಮೇಲೆ' ಎಂದು ದಿನೇಶ್ ಗುಂಡೂರಾವ್ ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News