ಗಲಭೆ ಸೃಷ್ಟಿಸುವವರ ವಿರುದ್ಧ ಯುಪಿ, ಮಧ್ಯಪ್ರದೇಶ ಮಾದರಿಯ ಕ್ರಮಕ್ಕೆ ಚಿಂತನೆ: ಸಚಿವ ಆರಗ ಜ್ಞಾನೇಂದ್ರ
Update: 2022-04-20 22:53 IST
ಶಿವಮೊಗ್ಗ, ಎ.20: ಗಲಭೆ ಸೃಷ್ಟಿಸುವವರ ವಿರುದ್ಧ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ರೀತಿ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿದಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೆರವಣಿಗೆ ಉತ್ಸವ ಆಗೋದು ಎಲ್ಲಿಂದಲೋ ಕಲ್ಲು ಹೊಡೆಯುವುದು ನಡೆಯುತ್ತಿದೆ. ಇಂತಹ ಘಟನೆ ನಡೆಯದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ದೆಹಲಿಯ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಗಲಭೆಯಲ್ಲಿ ತೊಡಗಿದವರ ವಿರುದ್ಧ ಬುಲ್ಡೋಜರ್‌ಗಳ ಬಳಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೆಹಲಿ, ಯುಪಿ, ಮಧ್ಯಪ್ರದೇಶ ಮಾದರಿ ಕಠಿಣ ಕ್ರಮ ಕೈಗೊಳ್ಳುವ ಚಿಂತನೆ ಸರ್ಕಾರದ ಮುಂದಿದೆ ಎಂದರು.