×
Ad

ನಿಗದಿತ ಸಮಯದಲ್ಲಿ ಕೆಲಸ ಮಾಡಿದಲ್ಲಿ ಭ್ರಷ್ಟತೆ ಕಡಿಮೆಯಾಗಲಿದೆ: ಸಿಎಂ ಬೊಮ್ಮಾಯಿ

Update: 2022-04-21 13:24 IST

ಶಿವಮೊಗ್ಗ, ಎ.21: ನಿಗದಿತ ಸಮಯದಲ್ಲಿ ಕೆಲಸ ಮಾಡಿದಲ್ಲಿ ಭ್ರಷ್ಟತೆ ಕಡಿಮೆಯಾಗುತ್ತದೆ. ಬದಲಾವಣೆ ಮಾಡೋಣ, ಬನ್ನಿ ಕೈ ಜೋಡಿಸಿ ಎಂದು ಸರಕಾರಿ ನೌಕರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ದಿನಾಚರಣೆ, 2022ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

: ಜಾಗತೀಕರಣ- ಉದಾರೀಕರಣ, ಖಾಸಗೀಕರಣ ಪರಿಣಾಮ ನೌಕರರ ಮೇಲೂ ಆಗಿದೆ. ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಮುಖ್ಯಮಂತ್ರಿ ಹೇಳಿದರು.

 ನಮ್ಮ ಜವಾಬ್ದಾರಿ, ಕರ್ತವ್ಯದ ಮಹತ್ವ ಅರಿತು ಕೆಲಸ ಮಾಡಬೇಕು. ಆಳುವುದು- ಆಡಳಿತ ನಡೆಸುವುದು ಬೇರೆ ಬೇರೆ. ಸಮಗ್ರ ಕರ್ನಾಟಕದ ಅಭಿವೃದ್ಧಿ ಫಲ ಜನರಿಗೆ ತಲುಪಿಸಬೇಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ನೆನಪಿಟ್ಟುಕೊಂಡು ಕೆಲಸ ಮಾಡಿ ಎಂದರು.

ಎರಡು ಲಕ್ಷ ಹುದ್ದೆಗಳು ಖಾಲಿಯಿದ್ದರೂ ಆಡಳಿತ ಯಂತ್ರ ಸುಗಮವಾಗಿ ನಡೆಯುತ್ತಿದೆ. ಇದಕ್ಕಾಗಿ ಎಲ್ಲಾ ನೌಕರರಿಗೇ ಅಭಿನಂದನೆಗಳು. ಇದೆಲ್ಲಾ ದೇವರು ಕೊಟ್ಟಿರುವ ಅವಕಾಶ. ಕೂತಲ್ಲೇ ಖುರ್ಚಿ ಬಿಸಿ ಮಾಡಬೇಡಿ, ಜನರಿಗಾಗಿ ಕೆಲಸ ಮಾಡಿ. ಒಳ್ಳೆಯದಕ್ಕೆ ನಿಮ್ಮೊಂದಿಗೆ ಇರುತ್ತೇನೆ, ಯಾವುದೇ ಭ್ರಷ್ಟತೆಗೆ ಅವಕಾಶ ಇಲ್ಲ. ಆಡಳಿತದಲ್ಲಿ ದಕ್ಷತೆ ನಮ್ಮ ಶುದ್ಧತೆಯಿಂದ ಬರುತ್ತದೆ ಎಂದರು.

ಗೃಹ ಸಚಿವ ಆರಗ ಜ್ಙಾನೇಂದ್ರ, ಸಚಿವರಾದ ಬೈರತಿ ಬಸವರಾಜ್, ಡಾ.ಆಶ್ವತ್ಥನಾರಾಯಣ, ಸಂಸದ ಬಿ.ವೈ ರಾಘವೇಂದ್ರ, ಶಾಸಕ ಕೆ.ಬಿ.ಅಶೋಕ್ ನಾಯ್ಕ್, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಎಂಎಡಿಬಿ ಅಧ್ಯಕ್ಷ ಎಂ.ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News