×
Ad

ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ನನ್ನನ್ನು ಜೈಲಿಗಟ್ಟಲು ಯತ್ನಿಸಿದ್ದರು: ಕುಮಾರಸ್ವಾಮಿ ಆರೋಪ

Update: 2022-04-21 13:38 IST

ಮೈಸೂರು, ಎ.21: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರದಲ್ಲಿದ್ದ ವೇಳೆ ನನ್ನನ್ನು ಜೈಲಿಗೆ ಕಳುಹಿಸಲು ಪ್ರಯತ್ನವನ್ನು ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹನ್ನೆರಡು ವರ್ಷಗಳ ಹಿಂದೆ ಬಿಜೆಪಿಯವರು ನನ್ನ ಮೇಲೆ ಎರಡು ಪ್ರಕರಣವನ್ನು ದಾಖಲಿಸಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಅವರ ರಾಜಕೀಯ ಸಲಹೆಗಾರ ವಾಚ್ ಕೊಟ್ಟ ಸಂದರ್ಭದಲ್ಲಿ ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದು ಅವರು ಪ್ರಯತ್ನಪಟ್ಟಿದ್ದರು.  ಅದು ಈಗ ನೆನಪಾಗಿರಬೇಕು. ಅದಕ್ಕೆ ಅವರು "ಈಶ್ವರಪ್ಪನ ಜೈಲಿಗೆ ಕಳುಹಿಸಬಾರದು ಎಂದು ಹೇಳುವ ಕುಮಾರಸ್ವಾಮಿಯನ್ನು ಜೈಲಿಗೆ ಕಳುಹಿಸಬೇಕಾ?" ಎಂದಿರುವುದು ಎಂದು ತಿರುಗೇಟು ನೀಡಿದ್ದಾರೆ.

'ಸುಳ್ಳಿನ ರಾಮಯ್ಯ'ರಿಗೆ ಬಿಜೆಪಿ ಭಯಕ್ಕಿಂತ ನನ್ನ ಭಯ ಹೆಚ್ಚು ಕಾಡುತ್ತಿದೆ. ಅದಕ್ಕೆ ಅವರು ನನ್ನ ಜೈಲಿಗೆ ಕಳುಹಿಸಬೇಕ ಎಂದಿರುವುದು ಎಂದು ಕುಮಾರಸ್ವಾಮಿ ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News