ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಶೇ.10ರಷ್ಟು ರಿಯಾಯಿತಿ ಅವಧಿ ವಿಸ್ತರಣೆ: ಸಚಿವ ಆರ್.ಅಶೋಕ್

Update: 2022-04-21 14:58 GMT

ಬೆಂಗಳೂರು, ಎ. 21: ‘ನೋಂದಣಿ ಹಾಗೂ ಮುದ್ರಾಂಕ ಶುಲ್ಕ ರಿಯಾಯಿತಿ ಮುಂದುವರಿಕೆಯಾಗಿದ್ದು, ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಶೇ.10ರಷ್ಟು ರಿಯಾಯಿತಿ ಮುಂದುವರೆಸುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಇಂದಿಲ್ಲಿ ಮಾಹಿತಿ ನೀಡಿದ್ದಾರೆ. 

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘2022ರ ಜನವರಿ 1ರಿಂದ 2022ರ ಮಾರ್ಚ್ 31ರ ವರೆಗೆ ಶೇ.10ರಷ್ಟು ರಿಯಾಯಿತಿ ಮಾಡಲಾಗಿತ್ತು. ಕೋವಿಡ್ ಸೋಂಕಿನ ಸಂಕಷ್ಟದ ಸಮಯದಲ್ಲಿ ಸ್ಟಾಂಪ್ ರಿಜಿಸ್ಟ್ರೇಷನ್ ದರ ಕಡಿಮೆ ಮಾಡಿದ್ದೆವು. ಶೇ.10ರಷ್ಟು ಕಡಿಮೆ ಮಾಡಿದ ಕಾರಣ ಹೆಚ್ಚಿನ ನೋಂದಣಿಗಳಾಗಿವೆ' ಎಂದು ವಿವರಿಸಿದರು.

‘ನೋಂದಣಿ ಶುಲ್ಕ ಕಡಿಮೆ ಮಾಡಿದ್ದರಿಂದ ಸರಕಾರಕ್ಕೂ ಆದಾಯ ಬಂದಿದ್ದು, ಜನ ಸಾಮಾನ್ಯರಿಗೂ ಅನುಕೂಲವಾಗಿದೆ. ರಿಯಾಯಿತಿ ಮುಂದುವರಿಸುವಂತೆ ಜನರಿಂದ ಬೇಡಿಕೆ ಬಂದಿದ್ದರಿಂದ ಮುಂದಿನ ಮೂರು ತಿಂಗಳು 2022ರ ಎ.25ರಿಂದ 2022ರ ಜುಲೈ 24ರ ವರೆಗೆ ಮಾರ್ಗಸೂಚಿ (ಗೈಡ್ಲೈನ್ಸ್ ವ್ಯಾಲ್ಯೂ) ದರದಲ್ಲಿ ಶೇ.10ರಷ್ಟು ರಿಯಾಯತಿ ಮಾಡಿದ್ದೇವೆ. ಎಲ್ಲ ರೀತಿಯ ಸ್ವತ್ತುಗಳ ಮಾರಾಟ ಮತ್ತು ಖರೀದಿಗೆ ಇದು ಅನ್ವಯಿಸುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡಿ ಆದೇಶ ಮಾಡುತ್ತಿದ್ದೇನೆ' ಎಂದು ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News