ದೇಶ-ವಿದೇಶಗಳಲ್ಲಿ ಲಕ್ಷಾಂತರ ಅಂಬೇಡ್ಕರ್ ಪ್ರತಿಮೆಗಳಿವೆ: ಡಾ.ಜಿ.ಪರಮೇಶ್ವರ್

Update: 2022-04-21 16:28 GMT

ಕೊರಟಗೆರೆ,ಏ.21:ಅಂಬೇಡ್ಕರ್ ಅವರ ಆದರ್ಶ ಮಾನವೀಯತೆಯ ಮೌಲ್ಯಗಳನ್ನು ಪರಿಚಯಿಸುವ ಕಾರಣಕ್ಕಾಗಿ ದೇಶ-ವಿದೇಶಗಳಲ್ಲಿ ಲಕ್ಷಾಂತರ ಅಂಬೇಡ್ಕರವರ ಪ್ರತಿಮೆಗಳನ್ನು ಇಟ್ಟು ಪೂಜ್ಯನೀಯ ಸ್ಥಾನದಲ್ಲಿ ಕಾಣುತ್ತಿದ್ದಾರೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.

ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದ ಜೈ ಭೀಮ್  ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ 131ನೇ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ 115ನೇ ಬಾಬು ಜಗಜೀವನ್ ರಾಂಅವರ ಜಯಂತೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ನಡೆದ ಶೋಷಣೆ ಮತ್ತು ಶಿಕ್ಷಣಕ್ಕಾಗಿ ಮಾಡಿದ ಹೋರಾಟಗಳನ್ನು ಮನದಲ್ಲಿಟ್ಟುಕೊಂಡು ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಲು ಹೋದಾಗ ಬ್ರಿಟಿಷರಿಗೆ ಭಾರತದ ತಳಸಮುದಾಯಗಳ ಮತ್ತು ದೀನ ದಲಿತರ ಅಭಿವೃದ್ಧಿಗಾಗಿ ಸ್ವಾತಂತ್ರ್ಯ ನೀಡಿ ಎಂದು ಕೇಳಿದರು.

ನಮ್ಮದೇಶದಲ್ಲಿ ಬಾಬಾ  ಸಾಹೇಬ್ ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ  ಅವರು ಜನಿಸಿದೆ ಹೋಗಿದ್ದರೆ,ದೇಶ ಅನಾಥವಾಗುತ್ತಿತ್ತು ನಾವೆಲ್ಲರೂ ಕೂಡ ಅನಾಥವಾಗುತ್ತಿದೆವು ಇದೀಗ ಅವರುಗಳು ದೀನ ದಲಿತರಿಗಾಗಿ ಮಾಡಿರುವ ಮಹಾನ್ ಸಾಧನೆಯಿಂದ ಇಂದು ನಮಗೆ ರಾಜಕೀಯ ಅಧಿಕಾರ ಶಿಕ್ಷಣ ಪಡೆಯುವ ಹಕ್ಕು ಮತ ಚಲಾಯಿಸುವ ಹಕ್ಕು ಎಲ್ಲಾ ಸಮಾನವಾದ ಹಕ್ಕುಗಳನ್ನು ಇಬ್ಬರು ಮಹಾನ್ ನಾಯಕರುಗಳು ನೀಡಿದ್ದಾರೆ ಇಲ್ಲವಾಗಿದ್ದರೆ ನಾವೆಲ್ಲರೂ ಕೂಡ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲವೆಂದು ಕಳವಳ ವ್ಯಕ್ತಪಡಿಸಿದರು.

ಇಂದು ದೇಶ ನಾವೆಲ್ಲರೂ ವೈಜ್ಞಾನಿಕವಾಗಿ ಬೆಳೆಯುತ್ತಿದ್ದು ನಮ್ಮ ಮಕ್ಕಳನ್ನು ಉತ್ತಮ ಶಾಲೆಗಳಲ್ಲಿ ಸೇರಿಸಿ ಒಳ್ಳೆಯ ಶಿಕ್ಷಣ ಕೊಡಿಸಬೇಕು ಇಂದಿನ ಯುವಕರು ವಿದ್ಯಾವಂತರಾದರೆ ಅವರೆಲ್ಲರೂ ಕೂಡ ಆರ್ಥಿಕವಾಗಿ ಸಬಲರಾಗುತ್ತಾರೆ  ಪೆÇೀಷಕರು ತಪ್ಪದೇ ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಅವರು ಈ ವೇಳೆ ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ ಮಾತನಾಡಿ,ಗ್ರಾಮೀಣ ಭಾಗಗಳಲ್ಲಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಅವರ ಜಯಂತಿಗಳನ್ನು ಆಚರಣೆ ಮಾಡುತ್ತಿರುವುದು ಸಂತೋಷದಾಯಕವಾಗಿದೆ  ಇಂದಿನ ಯುವಕರು ವಿದ್ಯಾವಂತರಾಗಿದ್ದೂ ಪ್ರಬುದ್ಧಮಾನ ರಾಗಿದ್ದಾರೆ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವ ಮನೋಭಾವವನ್ನು ಬೆಳೆಸಿಕೊಂಡು ಇಂತಹ ಜಯಂತಿಗಳನ್ನು ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಅವರು ವೇಳೆ ತಿಳಿಸಿದರು.

ನಮ್ಮನ್ನಾಳುವ ಇಂದಿನ ಸರಕಾರಗಳು ನಮ್ಮಂತಹ ದೀನದಲಿತರಿಗೆ  ಅಗತ್ಯವಿರುವಂತಹ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿ  ಅವರ ಬದುಕುಗಳನ್ನು ದುಸ್ತರವಾಗಿ ಮಾಡುತ್ತಿವೆ ಇದರಿಂದಾಗಿ ಇಂದಿನ ಯುವಕರು ಗಳು ಉತ್ತಮವಾದ ಸರ್ಕಾರವನ್ನ ಆಡಳಿತಕ್ಕೆ ತರಬೇಕು ಎಂದು ಅವರು ಹೇಳಿಕೆ ನೀಡಿದರು. 

ಚಿಂಪುಗಾನಹಳ್ಳಿ ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಣೆ ವೇಳೆ ಬೈಚಾಪುರ ಆದಿ ಜಾಂಬವಂಥ ಮಠದ ಓಬಳಯ್ಯ ಸ್ವಾಮೀಜಿ,ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ ಪ್ರಥಮ ದರ್ಜೆ ಗುತ್ತಿಗೆದಾರರಾದ ಏಡಿ ಬಲ ರಾಮಯ್ಯ ಕಾಂಗ್ರೆಸ್ ಮುಖಂಡರುಗಳಾದ ವಿಭೂತಿ ಸಿದ್ದಪ್ಪ ಟಿಸಿ ರಾಮಯ್ಯ ದೇವರಾಜು ಚಿಂಪುಗಾನ ಹಳ್ಳಿ, ರವಿಕುಮಾರ್ ಉಮಾಶಂಕರ್  ಕ್ಯಾಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ಶಿವಣ್ಣ ಸದಸ್ಯರುಗಳಾದ ಹರೀಶ್ ಶಿವಕುಮಾರ್ ಜಗದೀಶ್  ಊರಿನ ಮುಖಂಡರುಗಳಾದ ರೊಳಪ್ಪ ಕೆಂಪಣ್ಣ  ಕಾಟ್ಟಪ್ಪ ಹನುಮಂತರಾಯಪ್ಪ ಹೋಟೆಲ್ ರಾಜಣ್ಣ  ಅಶ್ವತಯ್ಯ, ಪತ್ರಕರ್ತ ರವಿಕುಮಾರ್  ಸೇರಿದಂತೆ ಜೈಭೀಮ್ ಯುವಕರ ಸಂಘದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News