ಆಸ್ಟ್ರೇಲಿಯಾ: ಪುಟಿನ್ ಪುತ್ರಿಯರ ವಿರುದ್ಧ ಹೊಸ ನಿರ್ಬಂಧ ಜಾರಿ

Update: 2022-04-22 17:42 GMT
Photo: PTI

ಸಿಡ್ನಿ, ಎ.22: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಇಬ್ಬರು ಪುತ್ರಿಯರು ಹಾಗೂ ವಿದೇಶ ವ್ಯವಹಾರ ಸಚಿವ ಸೆರ್ಗೆಯ್ ಲಾವ್ರೋವ್ ಪುತ್ರಿಯ ವಿರುದ್ಧ ಹೊಸ ನಿರ್ಬಂಧ ಜಾರಿಗೊಳಿಸಿರುವುದಾಗಿ ಆಸ್ಟ್ರೇಲಿಂಾ ಸರಕಾರ ಶುಕ್ರವಾರ ಹೇಳಿದೆ.

 ಇದರೊಂದಿಗೆ ಆಸ್ಟ್ರೇಲಿಯಾದ ನಿರ್ಬಂಧ ಪಟ್ಟಿಯಲ್ಲಿರುವ ರಶ್ಯನ್ನರ ಸಂಖ್ಯೆ 750ಕ್ಕೆ ತಲುಪಿದೆ. ನಿರ್ಬಂಧ ಪಟ್ಟಿಗೆ ಸೇರ್ಪಡೆಗೊಂಡ ಪುಟಿನ್ ಪುತ್ರಿಯರ ಹೆಸರನ್ನು ಆಸ್ಟ್ರೇಲಿಯಾ ಸರಕಾರ ಬಹಿರಂಗಗೊಳಿಸಿಲ್ಲ. ಆದರೆ ಪುಟಿನ್ ಅವರ ವಯಸ್ಕ ಪುತ್ರಿಯರಾದ ಕ್ಯತರಿನಾ ಟಿಕೊನೊವಾ ಮತ್ತು ಮರಿಯಾ ವೊರೊನ್‌ತ್ಸೊವಾ ನಿರ್ಬಂಧ ಪಟ್ಟಿಯಲ್ಲಿರುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪುಟಿನ್ ಮತ್ತು ಲಾವ್ರೋವ್ ವಿರುದ್ಧ ಆಸ್ಟ್ರೇಲಿಯಾ ಫೆಬ್ರರಿ 27ರಂದೇ ನಿರ್ಬಂಧ ಜಾರಿಗೊಳಿಸಿದೆ.

 ಉಕ್ರೇನ್‌ನ ಪ್ರತ್ಯೇಕತಾವಾದಿಗಳ ಪ್ರಾಬಲ್ಯವಿರುವ ಡೊನೆಟ್ಸ್ಕ್ ಮತ್ತು ಲುಹಾಂನ್ಸ್ಕ್ ಪ್ರಾಂತಗಳನ್ನು ಸ್ವತಂತ್ರ ಪ್ರಾಂತಗಳೆಂದು ಘೋಷಿಸಿದ ಪುಟಿನ್‌ಗೆ ಬೆಂಬಲ ನೀಡಿದ 144 ರಶ್ಯನ್ ಸೆನೆಟರ್(ಸಂಸದರು)ಗಳನ್ನೂ ಹೊಸದಾಗಿ ನಿರ್ಬಂಧ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಉಕ್ರೇನ್ ವಿರುದ್ಧದ ಅಸಮರ್ಥನೀಯ ಮತ್ತು ಅಪ್ರಚೋದಿತ ಆಕ್ರಮಣಕ್ಕೆ ಹೊಣೆಯಾಗಿರುವವರ ವಿರುದ್ಧ ಕಠಿಣ ನಿರ್ಬಂಧ ಜಾರಿಗೊಳಿಸುವ ಕ್ರಮ ಮುಂದುವರಿಯಲಿದೆ ಎಂದು ಆಸ್ಟ್ರೇಲಿಯಾದ ವಿದೇಶ ವ್ಯವಹಾರ ಇಲಾಖೆಯ ಸಚಿವೆ ಮರಿಸಾ ಪೇಂ್ನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News