ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ: 8 ಮಂದಿ ಆರೋಪಿಗಳ ಜಾಮೀನು ಅರ್ಜಿ ವಜಾ
Update: 2022-04-23 10:53 IST
ಕಲಬುರಗಿ: ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ದಿವ್ಯಾ ಹಾಗರಗಿ ಪತಿ ಸೇರಿದಂತೆ ಎಂಟು ಜನರು ಸಲ್ಲಿದ ಜಾಮೀನು ಅರ್ಜಿಯನ್ನು ಜೆಎಮ್ ಎಫ್ ಸಿ ನ್ಯಾಯಲಯ ವಜಾಗೊಳಿಸಿದೆ.
ದಿವ್ಯ ಹಾಗರಗಿ ಅವರ ಪತಿ ರಾಜೇಶ್ ಹಾಗರಗಿ, ಅರುಣ ಪಾಟೀಲ್, ರಾಜೇಶ್, ಪ್ರವೀಣ, ಹಾಗೂ ಚೇತನ್ ಅವರು ಕಲಬುರಗಿ ಜೆಎಮ್ಎಫ್ ಸಿ ನ್ಯಾಯಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದರು.
ಜಾಮೀನು ಕೊರೆದ ಎಲ್ಲಾ ಎಂಟು ಆರೋಪಿಗಳು ಬಂಧನದಲ್ಲಿ ಇದ್ದು, ಪ್ರಕರಣದ ಕುರಿತು ಸಿಐಡಿ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ. ಕೆಲವು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡ ಸ್ಥಳದಿಂದ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.