'ನೀವು ದುರ್ಬಲ ಹೋಂ ಮಿನಿಸ್ಟರ್ ಅಂತ ನಮ್ಮ ಕಾರ್ಯಕರ್ತರೇ ಹೇಳ್ತಿದ್ದಾರೆ': ಸಚಿವ ಆರಗ ಜ್ಞಾನೇಂದ್ರ
ಬೆಂಗಳೂರು: 'ಇತ್ತೀಚೆಗೆ ಕಾರ್ಯಕರ್ತರೇ ನನಗೆ ದುರ್ಬಲ ಹೋಂ ಮಿನಿಸ್ಟರ್ ಅಂತ ಹೇಳ್ತಿದ್ದಾರೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಗೃಹ ಸಚಿವರು, ಈ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
‘’ ಮೊನ್ನೆ ದಿನ್ ನಟ ಪುನೀತ್ ರಾಜ ಕುಮಾರ್ ಅವರು ನಿಧನ ಆದಾಗ, ಮುಖ್ಯಮಂತ್ರಿ ಸೇರಿದಂತೆ ನಾನು 3 ಗಂಟೆ ನಿದ್ದೆನೂ ಮಾಡದೆ ಪುನೀತ್ ಅವರ ಪಾರ್ಥಿವ ಶರೀರದ ಮುಂದೆ ಕುಳಿತುಕೊಂಡಿದ್ದೆವು. ವೇದಿಕೆಯಿಂದಲೇ ಎಲ್ಲ ವ್ಯವಸ್ಥೆ ಮಾಡಿದ್ದೆವು. 2006ರಲ್ಲಿ ನಟ ರಾಜಕುಮಾರ್ ನಿಧನರಾದಾಗ ರಾಜ್ಯದಲ್ಲಿ ಏಳೆಂಟು ಮಂದಿ ಫೈರಿಂಗ್ ನಲ್ಲಿ ಸಾವನ್ನಪ್ಪಿದ್ದರು. ಅದನ್ನೇ ನಾನು ಈ ಕಾರ್ಯಕರ್ತರಿಗೆ ಕೇಳಿದೆ, ಗೃಹ ಇಲಾಖೆ ಅವತ್ತು ಚೆನ್ನಾಗಿ ಕೆಲಸ ಮಾಡಿತ್ತೋ ಅಥವಾ ಇವತ್ತು ಮಾಡ್ತಾ ಇದೆಯೋ? ಶಿವಮೊಗ್ಗ ಪ್ರಕರಣ, ಹಿಜಾಬ್ , ಮೈಸೂರಿನ ಅತ್ಯಾಚಾರ ಪ್ರಕರಣ, ಹುಬ್ಬಳ್ಳಿ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನೆಲ್ಲ ಹೆಡೆಮುರಿ ಕಟ್ಟಿ ಬಂಧಿಸಿದ್ದೇವೆ ಇನ್ನೇನು ಆಗಬೇಕಿತ್ತು ಎಂದು ಕೇಳಿದೆ’’ ಎಂದು ತಿಳಿಸಿದರು.
'ಸದ್ಯ ಕರ್ನಾಟಕದಲ್ಲಿ ಉತ್ತರ ಪ್ರದೇಶದಂತ ಪರಿಸ್ಥಿತಿ ಇಲ್ಲ. ಅಲ್ಲಿನ ಸ್ಥಿತಿಯೇ ಬೇರೆ, ಅಲ್ಲಿ ಆದಿತ್ಯನಾಥ ಅವರು ಎನ್ ಕೌಂಟರ್ ಮಾಡದೇ ಇದ್ದಿದ್ದರೆ ಪರಿಸ್ಥಿತಿ ತಹಬದಿಗೆ ಬರಲು ಆಗ್ತಾ ಇರಲಿಲ್ಲ' ಎಂದು ಹೇಳಿದರು. .