×
Ad

VIDEO- ಮೈಸೂರು : ಹಿಂದೂ ಸಂಪ್ರದಾಯದಂತೆ ಜಯಮ್ಮ ಅಂತ್ಯ ಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರ ತಂಡ

Update: 2022-04-23 19:39 IST

ಮೈಸೂರು: ಹಿಂದೂ ಮುಸ್ಲಿಮ್ ಎಂಬ ಭೇದ ಬಾವ ಹುಟ್ಟುಹಾಕುತ್ತಿರುವ ಕೆಲವು ಮತೀಯವಾದಿಗಳ ನಡುವೆ ಹಿಂದೂ   ಮಹಿಳೆ ಜಯಮ್ಮ ಅವರ ಅಂತ್ಯ ಸಂಸ್ಕಾರವನ್ನು ಮುಸ್ಲಿಮ್ ಯುವಕರು ನೆರವೇರಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ  ಗೌಸಿಯಾ ನಗರದಲ್ಲಿ ಸುಮಾರು ಮೂರು ಸಾವಿರ ಮುಸ್ಲಿಮ್ ಕುಟುಂಬ ವಾಸಮಾಡುತ್ತಿದ್ದಾರೆ. ಇದರ ಮಧ್ಯೆ ಇದ್ದ ಓರ್ವ ಹಿಂದೂ ಮಹಿಳೆ ಜಯಮ್ಮ(60)ವರ್ಷ ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ ಪತಿ ದೇವರಾಜ್ ಮತ್ತು ಪುತ್ರ, ಸೊಸೆ ಮೊಮ್ಮಕ್ಕಳು ಬಿಟ್ಟರೆ ಯಾರೂ ಇಲ.

ಈ ಹಿಂದೂ ಕುಟುಂಬ ಸುಮಾರು 40 ವರ್ಷಗಳಿಂದ ಮುಸ್ಲಿಮ್ ಸಮುದಾಯದವರ ಮಧ್ಯೆ ವಾಸ ಮಾಡುತ್ತಿದ್ದು, ಇವರಿಗೆ ಮುಸ್ಲಿಮರು ಬಿಟ್ಟರೆ ಬೇರೆ ಯಾರೂ ಸಂಬಂಧಿಕರು ಇರಲಿಲ್ಲ, ಈ ಹಿಂದೆಯೆ ಜಯಮ್ಮ ಮುಸ್ಲಿಮ್ ಸಮುದಾಯದವರ ಕುರಿತು ನಾನು ಸಾವನ್ನಪ್ಪಿದರೆ ನೀವೆ ನನ್ನ ಅಂತ್ಯ ಸಂಸ್ಕಾರ ಮಾಡಬೇಕು ಎಂದು ಹೇಳುತ್ತಿದ್ದರು. ಹಾಗಾಗಿ ಮುಸ್ಲಿಮ್ ಸಮುದಾಯದ 50 ಯುವಕರು ಹಿಂದೂ ಸಂಪ್ರದಾಯದಂತೆ ಅವರ ಅಂತ್ಯ ಕೊನೇ ಕ್ಷಣಗಳನ್ನು ನೆರವೇರಿಸಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಸಾಮಾಜಿಕ ಹೋರಾಟಗಾರ ತನ್ವೀರ್ ಪಾಷ ನೇತೃತ್ಚದಲ್ಲಿ ಅಯೂಬ್, ಇರ್ಫಾನ್, ಜಬೀರ್, ಚಾಂದು, ಫಯಾಜ್, ಸಾಧಿಕ್ ಸೇರಿದಂತೆ ಹಲವರು ಅಂತ್ಯ ಸಂಸ್ಕಾರಕ್ಕೆ ನೆರವಾದರು.

ದ್ವೇಷ ಹುಟ್ಟು ಹಾಕುತ್ತಿರುವವರಿಗೆ ಈ ಚಿತ್ರ ಎದ್ದು ಕಾಣಬೇಕು, ರಾಜಕೀಯಕ್ಕಾಗಿ ಹಿಂದೂ-ಮುಸ್ಲಿಮ್ ಎಂಬ ದ್ವೇಷವನ್ನು ಬಿತ್ತುತ್ತಿದ್ದಾರೆ.ಯಾರು ಏನೆ ಮಾಡಿದರು ನಾವು ಬಾಂಧ್ಯವನ್ನು ಬಿಟ್ಟುಕೊಡುವುದಿಲ್ಲ, ದ್ವೇಷ ಹಂಚುತ್ತಿರುವವರಿಗೆ ನಾವು ಪ್ರೀತಿ ಹಂಚುತ್ತೇವೆ. ಇಂದಿಗೂ ನಮ್ಮ ರಾಜ್ಯದಲ್ಲಿ ಜಾತ್ಯಾತೀತ ಸೋದರತೆ ಉಳಿದಿದೆ. ಕೆಲ ಕ್ರಿಮಿಗಳ ಕ್ರೀಡೆ ಮೀಡಿಯಾದಿಂದ ಎದ್ದು ಕಾಣುತ್ತಿದೆ. ಆದರೆ ಇದು ವಾಸ್ತವವಲ್ಲ, 
ಕಳೆದ ಕೊರೋನ ಸಮಯದಲ್ಲೂ ನಾವು ಹೀಗರ ಸಾಮಾಜಿಕ ಕೆಲಸ ಮಾಡಿದ್ದೇವೆ.

- ತನ್ವೀರ್ ಪಾಷ, ಅಂತ್ಯ ಸಂಸ್ಕಾರ ನೆರವೇರಿಸಿದವರು ಹಾಗೂ ಸಾಮಾಜಿಕ ಹೋರಾಟಗಾರ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News