×
Ad

ಇದ್ದಕ್ಕಿದ್ದಂತೆ ನಿಷ್ಕ್ರಿಯಗೊಂಡ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವಿಟರ್‌ ಖಾತೆ!

Update: 2022-04-23 21:41 IST

ಕಲಬುರಗಿ: ನನ್ನ ಟ್ವಿಟರ್ ಖಾತೆಯು ಇದ್ದಕ್ಕಿದ್ದಂತೆ ನಿಷ್ಕ್ರೀಯವಾಗಿದೆ, ನಾನು ನನ್ನ ಖಾತೆಯನ್ನು ತೆರೆಯಲು ಸಾಧ್ಯವಾಗದ ರೀತಿಯಲ್ಲಿ ನಿಯಂತ್ರಣ ತಪ್ಪಿಸಲಾಗಿದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. 

ಈ ಕುರಿತು ತನ್ನ ಫೇಸ್ ಬುಕ್ ಖಾತೆಯಲ್ಲಿ ಮಾಹಿತಿ ನೀಡಿರುವ ಅವರು,   'ಇದು ಟ್ವಿಟರ್ ಸಂಸ್ಥೆಯವರಿಂದಾಗಿದೆಯೋ ಅಥವಾ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರೂ ಎಂದು ಇನ್ನೂ ನನಗೆ ತಿಳಿದಿಲ್ಲ, ಟ್ವಿಟರ್ ಸಂಸ್ಥೆಯಿಂದ ಈ ರೀತಿಯಾಗಿದ್ದರೆ ನನಗೆ ಸೂಚನೆ ನೀಡಲಾಗುತ್ತಿತ್ತು ಎಂದು ತಿಳಿದಿದ್ದೇನೆ, ಆದರೆ ಇದುವರೆಗೂ ನನಗೆ ಯಾವುದೇ ರೀತಿಯ  ಸೂಚನೆಗಳು ಬಂದಿರದ ಕಾರಣ ಹ್ಯಾಕ್ ಆಗಿರಬಹುದು ಎನಿಸುತ್ತಿದೆ' ಎಂದು ಹೇಳಿದ್ದಾರೆ.

'ನನ್ನ ಟ್ವಿಟರ್ ಖಾತೆಯು ನನ್ನ ನಿಯಂತ್ರಣಕ್ಕೆ ಸಿಗುವವರೆಗೂ ಅದರಲ್ಲಿ ಯಾವುದೇ ಬಗೆಯ ಅಸಂಬದ್ಧ, ಅಪ್ರಬುದ್ದ ಪೋಸ್ಟ್‌ಗಳು ಕಂಡುಬಂದಲ್ಲಿ ಅದು ನನ್ನದಾಗಿರುವುದಿಲ್ಲ ಎಂದು ತಿಳಿಯಬೇಕೆಂದು ನನ್ನ ಮನವಿ' ಎಂದು ತಿಳಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಕಟುವಾಗಿ ಟೀಕಿಸುತ್ತಿದ್ದ ಕಾಂಗ್ರೆಸ್‌ ನಾಯಕರಲ್ಲೊಬ್ಬರಾಗಿದ್ದ ಖರ್ಗೆ ಟ್ವಿಟರಿನಲ್ಲಿ ಸಕ್ರಿಯವಾಗಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News