×
Ad

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಆರೋಪಿ ರುದ್ರಗೌಡ ಪಾಟೀಲ್​ ಮಹಾರಾಷ್ಟ್ರದಲ್ಲಿ ವಶಕ್ಕೆ

Update: 2022-04-23 21:59 IST
ಆರೋಪಿ ರುದ್ರಗೌಡ ಪಾಟೀಲ್​ 

ಕಲಬುರಗಿ: ಶುಕ್ರವಾರ ಬಂಧನಕ್ಕೊಳಗಾದ ಅಫಜಲಪುರ ಬ್ಲಾಕ್‌ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಮಹಾಂತೇಶ್ ಪಾಟೀಲ್‌‌ನ ಸಹೋದರ ರುದ್ರಗೌಡ ಪಾಟೀಲ್​ ಎಂಬಾತನನ್ನು ಸಿಐಡಿ ಅಧಿಕಾರಿಗಳು ಶನಿವಾರ ಮಹಾರಾಷ್ಟ್ರದ ಸೋಲಾಪುರದಲ್ಲಿ ಬಂಧಿಸಿದ್ದಾರೆ.

ರುದ್ರಗೌಡ ಅವರ ಅಣ್ಣ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ್ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು. ಮುಖ್ಯ ಆರೋಪ ಎದುರಿಸುತ್ತಿರುವ ರುದ್ರಗೌಡ ಒಂದು ವಾರದಿಂದ ತಲೆ‌ಮರೆಸಿಕೊಂಡಿದ್ದು, ಆರೊಪಿ ಮಹಾರಾಷ್ಟ್ರದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದು, ಕಲಬುರಗಿಗೆ ಕರೆದುಕೊಂಡು ಬಂದಿದ್ದಾರೆ. 

545 ಪಿಎಸ್ಐ ಪರೀಕ್ಷೆಯಲ್ಲಿ ಆಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News