×
Ad

ಶಿವಮೊಗ್ಗ: ಡಿ.ಕೆ.ಶಿವಕುಮಾರ್ ಬ್ರಿಗೇಡ್ ವತಿಯಿಂದ ಬೇಸಿಗೆ ಕಾಲದ ಪಾನಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ

Update: 2022-04-23 23:34 IST

ಶಿವಮೊಗ್ಗ: ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಡಿ.ಕೆ.ಶಿವಕುಮಾರ್ ಬ್ರಿಗೇಡ್ ವತಿಯಿಂದ ಬೇಸಿಗೆ ಕಾಲದ ಅಂಗವಾಗಿ ಎರಡುತಿಂಗಳ ಕಾಲ ಮಜ್ಜಿಗೆ, ಪಾನಕ, ಶುದ್ಧ ಕುಡಿವ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಉಸ್ತುವಾರಿ ಕೆಪಿಸಿಸಿ ಕಾರ್ಯದರ್ಶಿ ದೇವೇಂದ್ರಪ್ಪ ಮಾತನಾಡಿ, ಹೆಚ್ಚು ಬಡ,ಕೂಲಿ ಕಾರ್ಮಿಕರು ಇರುವ ಸ್ಥಳದಲ್ಲಿ ಪ್ರತಿದಿನ ಒಂದೊಂದು ಕಡೆ 5ರಿಂದ 6ಸಾವಿರ ಜನಕ್ಕೆ ತಂಪಾದ ಮಜ್ಜಿಗೆ, ಬೆಲ್ಲದ ಪಾನಕ ಹಾಗೂ ಮಡಿಕೆ ನೀರು ಕೊಡಲಾಗುವುದು. ಹಬ್ಬ ದಿನಗಳಂದು ಉಚಿತವಾಗಿ ಕಲ್ಲಂಗಡಿ, ಹಣ್ಣು, ಜ್ಯೂಸ್ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಮಾಜಿ ಎಂಎಲ್‌ಸಿ ಆರ್.ಪ್ರಸನ್ನ ಕುಮಾರ್, ಬೇಳೂರು ಗೋಪಾಲಕೃಷ್ಣ, ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಯು.ಶಿವಾನಂದ್, ಶಿವಕುಮಾರ್, ಪೇಂಟರ್ ಬಾಬು ಡಿಕೆ ಶಿವಕುಮಾರ್ ವಿಕೆಟ್‌ನ ಬಿಸಿ ರಾಘವೇಂದ್ರ, ಶಿವಮೊಗ್ಗ ಜಿಲ್ಲಾ ಐನ್‌ಟಿಯುಸಿ ನಿಹಾಲ್ ಸಿಂಗ್, ಕವಿತಾ ರಾಘವೇಂದ್ರ, ಶಿವಾನಂದ, ಶಿವಕುಮಾರ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News