ದಲಿತ ನಾಯಕ ದಿ. ಚಂದ್ರಪ್ರಸಾದ್ ತ್ಯಾಗಿ ಪುಸ್ತಕ ಬಿಡುಗಡೆ

Update: 2022-04-24 07:38 GMT

ಹಾಸನ: ದಲಿತ ನಾಯಕ ದಿ. ಚಂದ್ರಪ್ರಸಾದ್ ತ್ಯಾಗಿಯವರ ಬಗ್ಗೆ  ಚಳವಳಿಯ ಅನೇಕರು ಬರೆದಿರುವ ಪುಸ್ತಕವನ್ನು ಶನಿವಾರ ಹಾಸನದ ಅಂಬೇಡ್ಕರ್ ಭವನದಲ್ಲಿ ಬಿಡುಗಡೆ ಮಾಡಲಾಯಿತು.

ದಲಿತ ಸಂಗರ್ಷ ಸಮಿತಿಯ ಹಲವಾರು ಮುಖಂಡರುಗಳು, ಸಾಹಿತಿಗಳು, ಕವಿಗಳು, ಪ್ರಗತಿಪರ ಚಿಂತಕರು ರಾಜಕೀಯ ಧುರೀಣರುಗಳು ಹಾಗೂ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಪ್ರೊ. ಅಪ್ಪಗೆರೆ ಸೋಮಶೇಖರ್, ಡಾ. ಶೇಖರ್ ಮತ್ತು ನರೇಂದ್ರ ಕುಮಾರ್ ಸಂಪಾದಿಸಿರುವ ತ್ಯಾಗಿ ಪುಸ್ತಕವನ್ನು  ಖ್ಯಾತ ಚಿಂತಕರಾದ ಅರವಿಂದ ಮಾಲಗತ್ತಿಯವರು ಬಿಡುಗಡೆ ಮಾಡಿದರು.

ತ್ಯಾಗಿಯವರ ಬಗೆಗಿನ ಈ ಪುಸ್ತಕವು ಈಗಿನ ದಲಿತ ಚಳವಳಿಯ ಕಾರ್ಯಕರ್ತರುಗಳಿಗೆ, ಮುಖಂಡರುಗಳಿಗೆ ಮಾರ್ಗದರ್ಶನ ಮತ್ತು ಸ್ಪೂರ್ತಿಯ ಆಕರವಾಗಿದೆ ಎಂದು ಅಭಿಪ್ರಾಯಪಟ್ಟರು. 

ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿದ ಖ್ಯಾತ ವಕೀಲ ಪ್ರೊ. ರವಿವರ್ಮ ಕುಮಾರ್ ಮಾತನಾಡಿ, ತ್ಯಾಗಿಯವರು ರಾಜ್ಯದ ದಲಿತ ಸಮುದಾಯದ ಜನರ ಸ್ವಾಭಿಮಾನಕ್ಕಾಗಿ, ವಸತಿಗಾಗಿ, ಉದ್ಯೋಗದ ಹಕ್ಕಿಗಾಗಿ, ಭೂಮಿಹಕ್ಕಿಗಾಗಿ ಹೋರಾಟಗಳನ್ನ ಮಾಡಿದ್ದರು, ಅವರ ನಿರಂತರ ಹೋರಾಟದ ಬದುಕಿನಿಂದಾಗಿ ದಲಿತ ಸಮುದಾಯ  ತಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣಲು ಸಾಧ್ಯವಾಯಿತು. ನಿರಂತರವಾಗಿ ಸಮುದಾಯದೊಳಿತಿಗಾಗಿ ಹೋರಾಟ ಮಾಡುತ್ತಲೇ ಬದುಕಿದ ತ್ಯಾಗಿಯವರು ತಮ್ಮ ವೈಯುಕ್ತಿಕ ಆರೋಗ್ಯದ ಕಡೆಗಡ ಗಮನ ಕೊಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ದಲಿತ ಚಳವಳಿಯು ಮಹಾನ್ ದಾರ್ಶನಿಕನೊಬ್ಬನನ್ನು ಕಳೆದುಕೊಳ್ಳಬೇಕಾಯಿತು. ತಮ್ಮ ಹೊಟ್ಟೆಯ ಹಸಿವಿನ ಬಗ್ಗೆಯಾಗಲೀ, ತಮ್ಮ ಮನೆಯವರ ಬಗ್ಗೆಯಾಗಲಿ ಕಾಳಜಿವಹಿಸದ ತ್ಯಾಗಿಯವರು ರಾಜ್ಯದಾದ್ಯಂತ ಪ್ರವಾಸ ಮಾಡಿ ತಳಸಮುದಾಯದವರನ್ನು ಅನ್ಯಾಯಗಳ ವಿರುದ್ಧ ಸಂಘಟಿಸಿದರು ಎಂದು ನೆನಪು ಮಾಡಿಕೊಂಡರು.

ಮಾಜಿ ಸಚಿವರಾದ ಮೋಟಮ್ಮ, ಎಚ್. ಸಿ ಮಹಾದೇವಪ್ಪ, ರಂಗಕರ್ಮಿ ಜನಾರ್ಧನ್ (ಜನ್ನಿ), ವಕೀಲರಾದ ಬಾನು ಮುಶ್ತಾಕ್, ಚಿತ್ರಕಲಾವಿದರಾದ ಕೆಟಿ ಶಿವಪ್ರಸಾದ್, ದಲಿತ ಮುಖಂಡುಗಳಾದ, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ಇಂದಿರಾ ಕೃಷ್ಣಪ್ಪ, ಚಂದ್ರಮ್ಮ ತ್ಯಾಗಿ, ದರ್ಶನ್ ಎಸ್ ಕೆ.ಮತ್ತು ಅನೇಕ ದಲಿತ ಮುಖಂಡರುಗಳು, ಕಾರ್ಯಕರ್ತರುಗಳು ಭಾಗವಹಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News