ಭ್ರಷ್ಟಾಚಾರದಿಂದಲೇ ಬಿಜೆಪಿ ಸರ್ಕಾರದ ಜನ್ಮ : ಡಿಕೆಶಿ ಲೇವಡಿ
ಚಿಕ್ಕಮಗಳೂರು :ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಬಿಜೆಪಿ ಸರ್ಕಾರದ ಜನ್ಮ ಭ್ರಷ್ಟಾಚಾರದಿಂದಲೇ ಆರಂಭ ಆದದ್ದು ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಕೊಪ್ಪ ತಾಲ್ಲೂಕು ಹರಿಹರಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ, ಸಚಿವ ಅಶ್ವಥ್ ನಾರಾಯಣ್, ಯೋಗೀಶ್ವರ್ ಅನೇಕ ಶಾಸಕರು ತಮ್ಮ ಮನೆಗೆ ಹಣ ತಂದು ಕೊಟ್ಟರು ಎಂದು ಅಸೆಂಬ್ಲಿಯಲ್ಲೇ ಹೇಳಿದ್ದಾರೆ ಎಂದು ಆರೋಪಿಸಿದರು.
ಭ್ರಷ್ಟಾಚಾರದ ಈ ಸರ್ಕಾರದ ಜನ್ಮ ದಿನ ನಡೆಯುತ್ತಿದೆ. ಯಾವ ಎಕ್ಸಾಂ ಬರಿ, ಪೋಸ್ಟಿಂಗ್ ತಗೋ, ಯಾವ ಕೆಲಸ ತಗೋ ಎಲ್ಲಾ ಕಡೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಟೀಕಿಸಿದರು. ಪ್ರತಿ ಕೆಲಸದಲ್ಲಿಯೂ ಇಷ್ಟು ಹಣ ಫಿಕ್ಸ್ ಎಂದು ಹಿಂದಿನ ಕಮಿಷನರ್ ಹೇಳಿದ್ದಾರೆ ಎಂದರು.
ಸರ್ಕಾರ ಕ್ರಮ ಕೈಗೊಳ್ಳಬೇಕು, ಇಲ್ಲ ಒಪ್ಪಿಕೊಳ್ಳಬೇಕು. ಪಿ.ಎಸ್.ಐ ನೇಮಕಾತಿಯಲ್ಲಿ ಅಕ್ರಮಕ್ಕೂ ಕಾಂಗ್ರೆಸ್ ಗೂ ಏನು ಸಂಬಂಧ ಎಂದು ಪ್ರಶ್ನಿಸಿ ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ. ಇದಕ್ಕೆ ನೇರ ಹೊಣೆಗಾರರು ಗ್ರಹ ಮಂತ್ರಿಗಳೇ ಎಂದು ಆರೋಪಿಸಿದರು.
ಈ ಹಗರಣವನ್ನ ಹೊರಗಡೆ ತಂದಿದ್ದೇ ಕಾಂಗ್ರೆಸ್. ಯಾರು ಏನು ತಪ್ಪು ಮಾಡಿದ್ದಾರೆ ತನಿಖೆ ಆಗಬೇಕು. ಕಾನೂನಿನಂತೆ ಶಿಕ್ಷೆ ಆಗಬೇಕು ಎಂದು ಡಿಕೆಶಿ ಒತ್ತಾಯಿಸಿದರು.