×
Ad

VIDEO|ಲೋಕೋಪಯೋಗಿ ಇಲಾಖೆಯ ಜೆಇ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ?:ಬ್ಲೂಟೂತ್‌ ಬಳಸಿ ಉತ್ತರ ಹೇಳುತ್ತಿದ್ದ ವಿಡಿಯೋ ವೈರಲ್

Update: 2022-04-24 19:05 IST

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆ ನಡೆಸುವ ಪರೀಕ್ಷೆಯೊಂದಕ್ಕೆ ವ್ಯಕ್ತಿಯೊಬ್ಬ ಲಾಡ್ಜ್‌ನಲ್ಲಿ ಕುಳಿತು ಮೊಬೈಲ್‌ ಮೂಲಕ ಉತ್ತರಗಳನ್ನು ಹೇಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

2021ರ ಡಿಸೆಂಬರ್ 13ರಲ್ಲಿ ನಡೆದ ಪಿಡಬ್ಲ್ಯೂಡಿ ಜೂನಿಯರ್ ಇಂಜಿನಿಯರ್ ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಸಿ ಅಕ್ರಮ ಎಸಗಿರುವ ವಿಡಿಯೋ ಲಭ್ಯವಾಗಿದೆ. ಪಿಎಸ್ಐ ಪರೀಕ್ಷೆ ಅಕ್ರಮ ಪ್ರಕರಣ ಬೆನ್ನತಿದ್ದ ಸಿಐಡಿ ಪೊಲೀಸರಿಗೆ ದಿನಕ್ಕೊಂದು ತಿರುವು ಸಿಗುತ್ತಿದೆ.

ಮೊದಲು ಈ ವಿಡಿಯೋ ಪಿಎಸ್ಐ ಪರೀಕ್ಷೆಗೆ ಹೇಳಲಾದ ಉತ್ತರಗಳು ಎಂದಾಗಿತ್ತು. ಆದರೆ, ಈಗ ಬ್ಲೂಟೂತ್ ಬಳಸಿ ಉತ್ತರ ನೀಡುತ್ತಿರುವ ವಿಡಿಯೋ ಬೇರೆ ಎಂದು ಹೇಳಲಾಗುತ್ತಿದೆ. ಪಿಡಬ್ಲ್ಯೂಡಿ ಜೂನಿಯರ್ ಇಂಜಿನಿಯರ್ ಪರೀಕ್ಷೆಯಲ್ಲಿ ಬಂದ ಪ್ರಶ್ನೆಗಳಿಗೆ ಹೇಳಲಾದ ಉತ್ತರಗಳು ಎನ್ನಲಾಗುತ್ತಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News