×
Ad

ಬಂಡವಾಳಶಾಯಿ ವ್ಯವಸ್ಥೆ ತನ್ನ ಉಳಿವಿಗಾಗಿ ಪ್ಯಾಸಿವಾದ ಹುಟ್ಟು ಹಾಕುತ್ತದೆ: ಅಮಿತವ ಚಾಟರ್ಜಿ

Update: 2022-04-24 21:26 IST

ಬೆಂಗಳೂರು, ಎ. 24: ಬಂಡವಾಳಶಾಹಿ ವ್ಯವಸ್ಥೆಯು ತನ್ನ ಉಳಿವಿಗಾಗಿ ಫ್ಯಾಸಿವಾದದ ಮೊರೆ ಹೋಗುತ್ತದೆ ಹಾಗೂ ಜನರ ಗಮನವನ್ನು ತಮ್ಮ ನೈಜ ಸಮಸ್ಯೆಗಳಿಂದ ದಿಕ್ಕು ತಪ್ಪಿಸಲು ಕೋಮುವಾದಿ, ಜಾತಿವಾದಿ ಗಲಭೆಗಳನ್ನು ಹುಟ್ಟು ಹಾಕುತ್ತಾರೆ ಎಂದು ಎಸ್‍ಯುಸಿಐ ಪಕ್ಷದ ಪಾಲಿಟ್ ಬ್ಯುರೊ ಸದಸ್ಯ ಅಮಿತವ ಚಾಟರ್ಜಿ ಹೇಳಿದ್ದಾರೆ. 

ರವಿವಾರ ನಗರದ ಶೇಷಾದ್ರಿಪುರಂನಲ್ಲಿರುವ ಆರ್.ಗುಂಡೂರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ ಎಸ್‍ಯುಸಿಐ( ಪಕ್ಷದ 75ನೆ ಸಂಸ್ಥಾಪನಾ ದಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ರಶ್ಯಾ- ಉಕ್ರೇನ್ ಯುದ್ಧವೂ ಬಂಡವಾಳಶಾಹಿಗಳ ಹಿತಾಸಕ್ತಿಯನ್ನು ಪೂರೈಸಲು, ಮಾರುಕಟ್ಟೆಯನ್ನು ಕಬಳಿಸಲು ನಡೆಯುತ್ತಿದೆ. ಆದರೆ, ಈ ಯುದ್ಧದಲ್ಲಿ ರೈತ-ಕಾರ್ಮಿಕ ಮಕ್ಕಳಾದ ಸೈನಿಕರು ಹಾಗೂ ಅಮಾಯಕ ಜನಸಾಮಾನ್ಯರು ಸಾವನ್ನಪ್ಪುತ್ತಿದ್ದಾರೆ ಎಂದು ಕಿಡಿಕಾರಿದರು. 

ಇದೇ ಮಾರ್ಗವನ್ನು ಈಗಿನ ಬಿಜೆಪಿ ಸರಕಾರ ಕೂಡ ಚಾಚೂ ತಪ್ಪದೇ ಅನುಸರಿಸುತ್ತಿದೆ. ಅತ್ಯಂತ ಜನ ವಿರೋಧಿ ನೀತಿಗಳನ್ನು ಅನುಸರಿಸಿ, ಬಂಡವಾಳಶಾಹಿಗಳ ಬೆನ್ನೆಲುಬಾಗಿ ಇಂದು ಬಿಜೆಪಿ ಸರಕಾರವು ನಿಂತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಕ್ಷದ ರಾಜ್ಯ ಸಮಿತಿ ಸದಸ್ಯ ಎಚ್.ವಿ.ದಿವಾಕರ್, ಪಕ್ಷದ ಸದಸ್ಯರು ಹಾಗೂ ಬೆಂಬಲಿಗರು ಪಕ್ಷವು ವಿಸ್ತಾರವಾಗುತ್ತಿರುವ ಸಂದರ್ಭದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ಹೊತ್ತುಕೊಳ್ಳಬೇಕೆಂದು ಮನವಿ ಮಾಡಿ ಜನ ಹೋರಾಟಕ್ಕೆ ಕರೆ ಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News