×
Ad

ಹನೂರು: ಖಾಸಗಿ ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ

Update: 2022-04-24 23:33 IST

ಹನೂರು : ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ಒಂದರಲ್ಲಿ ನವಜಾತ ಶಿಶು ಪತ್ತೆಯಾಗಿದೆ.

ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬ್ಯಾಗ್ ವೊಂದರಲ್ಲಿ ಮಗು ಇರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದಿದ್ದಾರೆ. 

ಹಲವಾರು ಗಂಟೆಗಳ ನಂತರ ಬ್ಯಾಗ್ ಬಳಿ ಯಾರೂ ಇರಲಿಲ್ಲ. ಬ್ಯಾಗ್ ಅಲುಗಾಡಿದನ್ನು ಕಂಡ ಸಾರ್ವಜನಿಕರು ಬ್ಯಾಗ್ ತೆರೆದು ನೋಡಿದಾಗ ಹಸಗೂಸು ಇರುವುದು ಪತ್ತೆಯಾಯಿತು.

ಮಗುವಿನ ವಾರಸುದಾರರನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಬಸ್ ನಿಲ್ದಾಣದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

ಮುದ್ದಾದ ಮಗುವನ್ನು ಸಾಕಲು ಸಾರ್ವಜನಿಕರು ಮುಂದೆ ಬಂದಿದ್ದು, ಪೊಲೀಸರು ಯಾವ ರೀತಿ ಕ್ರಮ‌ಕೈಗೊಳ್ಳುವರು ಎನ್ನುವುದು ಕಾದು ನೋಡಬೇಕಾಗಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News