ಗುಂಡ್ಲುಪೇಟೆ: ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತ್ಯು
Update: 2022-04-25 10:15 IST
ಚಾಮರಾಜನಗರ, ಎ.25: ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಕಳ್ಳಿ ಕಾಲನಿಯಲ್ಲಿ ರವಿವಾರ ನಡೆದಿದೆ.
ಮೂಕಳ್ಳಿ ಕಾಲನಿಯ ನಿವಾಸಿಗಳಾದ ಮಹೇಶ್(15) ಮತ್ತು ವಿಶ್ವ(17) ಕೆರೆಯಲ್ಲಿ ಮುಳುಗಿ ಮೃತಪಟ್ಟ ಬಾಲಕರಾಗಿದ್ದಾರೆ.
ಈ ಯುವಕರು ಹೊಸಕಟ್ಟೆ ಕೆರೆಯಲ್ಲಿ ಈಜಾಡಲು ತೆರಳಿದ್ದಾಗ ಮುಳುಗಿ ಮೃತಪಟ್ಟಿದ್ದಾರೆ.
ಶನಿವಾರ ರಾತ್ರಿ ಸುರಿದ ಮಳೆ ನೀರಿಗೆ ಕೆರೆಯು ಒಂದೇ ದಿನದಲ್ಲಿ ಭರ್ತಿಯಾಗಿತ್ತು . ರಜಾ ದಿನವಾದ ಕಾರಣ ಕೆರೆಗೆ ಈಜಾಡಲು ತೆರಳಿದ್ದ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.