ಪ್ರಿಯಾಂಕ್ ಖರ್ಗೆಗೆ ಉತ್ತರ ಭಾರತದ ಕಡೆಯಿಂದ ಜೀವ ಬೆದರಿಕೆ ಕರೆ: ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಆರೋಪ
ಬೆಂಗಳೂರು: 'ಮೊನ್ನೆಯಷ್ಟೇ ಪ್ರಿಯಾಂಕ್ ಖರ್ಗೆಯವರ ಟ್ವಿಟರ್ ಖಾತೆಯನ್ನು ನಿಷ್ಕ್ರಿಯಗೊಳಿಸುವ ಹುನ್ನಾರ ನಡೆದ ಬೆನ್ನಲ್ಲೇ ಅವರಿಗೆ ಉತ್ತರ ಭಾರತದ ಕಡೆಯಿಂದ ಜೀವ ಬೆದರಿಕೆ ಕರೆ ಬಂದಿತ್ತು' ಎಂದು ಮಾಜಿ ಸಚಿವ ಎಚ್.ಸಿ ಹೆಚ್ ಸಿ ಮಹದೇವಪ್ಪ ಆರೋಪಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, 'ಪಿಎಸ್ ಐ ಅಕ್ರಮ ನೇಮಕಾತಿ ವಿಷಯದಲ್ಲಿ ದನಿ ಎತ್ತಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ನೋಟಿಸ್ ನೀಡಿರುವ ಸರ್ಕಾರದ ಕ್ರಮ ಹಾಸ್ಯಾಸ್ಪದವಾಗಿದೆ.ಅಕ್ರಮಗಳನ್ನೇ ಬಂಡವಾಳ ಮಾಡಿಕೊಂಡು ಸರ್ಕಾರ ನಡೆಸುತ್ತಿರುವ ಬಿಜೆಪಿಗರಿಗೆ ಆಡಳಿತ ನಡೆಸುವುದು ಗೊತ್ತಿಲ್ಲದ ಸಂಗತಿಯಾಗಿದೆ' ಎಂದು ಕಿಡಿಗಾರಿದರು.
'ಈ ಬೆಳವಣಿಗೆಯು ಬಿಜೆಪಿಯ ಆಡಳಿತದಲ್ಲಿ ಅಪಾಯಕಾರಿ ವಾತಾವರಣ ಇದೆ ಎಂಬ ಸಂಗತಿಯನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ. ಅಕ್ರಮಗಳನ್ನು ಕಂಡು ಹಿಡಿಯಬೇಕಾದ ಸರ್ಕಾರವು ಅಕ್ರಮಗಳ ಬಗ್ಗೆ ದನಿ ಎತ್ತಿದ್ದವರನ್ನೇ ವಿಚಾರಣೆಗೆ ಕರೆದಿರುವುದು ಇವರ ಅಸಮರ್ಥ ಆಡಳಿತಕ್ಕೆ ಹಿಡಿದ ಕನ್ನಡಿ' ಎಂದು ಹೇಳಿದ್ದಾರೆ.
'ಸರ್ಕಾರವು ತಕ್ಷಣ ಪಿ ಎಸ್ ಐ ಅಕ್ರಮ ಮಾಡಿದವರ ವಿರುದ್ಧ ಕ್ರಮ ಜರುಗಿಸಲಿ ಮತ್ತು ಜೀವ ಬೆದರಿಕೆಯನ್ನು ಎದುರಿಸುತ್ತಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಭದ್ರತೆ ಒದಗಿಸಲಿ' ಎಂದು ಎಚ್.ಸಿ ಹೆಚ್ ಸಿ ಮಹದೇವಪ್ಪ ಒತ್ತಾಯಿಸಿದ್ದಾರೆ.
ಮೊನ್ನೆಯಷ್ಟೇ ಪ್ರಿಯಾಂಕ್ ಖರ್ಗೆಯವರ ಟ್ವಿಟರ್ ಖಾತೆಯನ್ನು ನಿಷ್ಕ್ರಿಯಗೊಳಿಸುವ ಹುನ್ನಾರ ನಡೆದ ಬೆನ್ನಲ್ಲೇ ಅವರಿಗೆ ಉತ್ತರ ಭಾರತದ ಕಡೆಯಿಂದ ಜೀವ ಬೆದರಿಕೆ ಕರೆ ಬಂದಿತ್ತು.
— Dr H.C.Mahadevappa (@CMahadevappa) April 25, 2022
ಈ ಬೆಳವಣಿಗೆಯು ಬಿಜೆಪಿಯ ಆಡಳಿತದಲ್ಲಿ ಅಪಾಯಕಾರಿ ವಾತಾವರಣ ಇದೆ ಎಂಬ ಸಂಗತಿಯನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ.
2/3