ಸಿದ್ದರಾಮಯ್ಯ ಹುಣಸೂರಿನಿಂದ ಸ್ಪರ್ಧಿಸಿದರೆ ನಾವೆಲ್ಲ ಸೇರಿ ಗೆಲ್ಲಿಸ್ತೇವೆ: ಎಚ್.ವಿಶ್ವನಾಥ್
Update: 2022-04-25 14:17 IST
ಮೈಸೂರು, ಎ.25: ಸಿದ್ದರಾಮಯ್ಯ ಹುಣಸೂರಿನಿಂದ ಸ್ಪರ್ಧೆ ಮಾಡಿದರೆ ನಾವೆಲ್ಲ ಸೇರಿ ಅವರನ್ನು ಗೆಲ್ಲಿಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಣಸೂರಿನಲ್ಲಿ ಶೆಟ್ಟರು ಸಮುದಾಯದ ಮಂಜುನಾಥ್ ಅವರನ್ನೇ ಗೆಲ್ಲಿಸಲಾಗಿದೆ. ಇನ್ನು ಸಿದ್ದರಾಮಯ್ಯ ಅವರನ್ನು ಗೆಲ್ಲಿಸುವುದಿಲ್ಲವೆ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು. ಅಂಥವರು ವಿಧಾನ ಸಭೆಯಲ್ಲಿ ಇರಬೇಕು. ಅವರ ಸಲಹೆ ಸಹಕಾರ ಸರಕಾರಕ್ಕೆ ಬೇಕು. ಹಾಗಾಗಿ ಸಿದ್ದರಾಮಯ್ಯ ಚುನಾವಣೆಯಲ್ಲಿ ಗೆಲ್ಲಬೇಕು. ಅವರು ಹುಣಸೂರಿನಿಂದ ಸ್ಪರ್ಧೆ ಮಾಡಿದರೆ ನಾವೆಲ್ಲ ಸೇರಿ ಗೆಲ್ಲಿಸುತ್ತೇವೆ ಎಂದು ಹೇಳಿದರು.